ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ (ಪಿಎಂಎಫ್‌ಬಿವೈ)

ಬೆಳೆ ವಿಮೆ ಎಂದರೆ  ಹವಾಮಾನ ವೈಪರೀತ್ಯಗಳ ಕಾರಣದಿಂದ ರೈತರು ತಮ್ಮ ಬೆಳೆ ನಷ್ಟ ಮತ್ತು ಬೆಳೆ ನಾಶದಿಂದ ಅನುಭವಿಸುವ ಆರ್ಥಿಕ ಸಂಕಷ್ಟವನ್ನು ಕಡಿಮೆಗೊಳಿಸುವ ಒಂದು ವ್ಯವಸ್ಥೆಯಾಗಿದೆ.

 

ಪ್ರಧಾನ್ ಮಂತ್ರಿ ಫಾಸಲ್ ಬೀಮಾ ಯೋಜನೆ (ಪಿಎಂಎಫ್‌ಬಿವೈ) ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಹಾಗೂ ಅಪಾಯ ಸಂಭಾವ್ಯತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪೂರ್ವನಿರ್ಧರಿತ ಮಟ್ಟದಲ್ಲಿ ರೈತರು ತಮ್ಮ ಬೆಳೆ ಉತ್ಪಾದನೆಯನ್ನು ನಿರ್ದಿಷ್ಟ ವಿಮಾ ಕಂಪನಿಗೆ  ವಿಮೆ ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಉತ್ಪಾದನೆಯನ್ನು ಹೊಂದುವಂತೆ ಮಾಡುವ ಗುರಿಯನ್ನು ಹೊಂದಿದೆ.

 

 

ಈ ಯೋಜನೆಯು ಜನವರಿ 13, 2016 ರಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದ ಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಿದರು. ಈ ಯೋಜನೆಯ ಮುಖ್ಯ ಉದ್ದೇಶ ನಮ್ಮ ರೈತರಿಗೆ ಅತಿ ಕಡಿಮೆ ಬೆಲೆಗೆ ಬೆಳೆ ವಿಮೆಯನ್ನು ಒದಗಿಸುವುದಾಗಿದೆ. ನಮ್ಮ ದೇಶದಲ್ಲಿ ರೈತರ ಆತ್ಮಹತ್ಯಾ ಪ್ರಮಾಣ ಹೆಚ್ಚಾಗಿರುವ ಈ ಸಂಧರ್ಭದಲ್ಲಿ ಪಿಎಂಎಫ್‌ಬಿವೈ ಯೋಜನೆಯು ರೈತರಿಗೆ ಕಡಿಮೆ ಪ್ರೀಮಿಯಂ ಬೆಲೆಗೆ ಬೆಳೆ ವಿಮೆಯನ್ನು ಒದಗಿಸಿ, ಅಂತಹ ಅನಾಹುತಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ ಆಹಾರ ಬೆಳೆಗಳು (ಸಿರಿಧಾನ್ಯಗಳು, ರಾಗಿ ಮತ್ತು ಬೇಳೆಕಾಳುಗಳು), ಎಣ್ಣೆಕಾಳುಗಳು, ವಾರ್ಷಿಕ ವಾಣಿಜ್ಯ / ವಾರ್ಷಿಕ ತೋಟಗಾರಿಕಾ ಬೆಳೆಗಳಿಗೆ ವಿಮೆ ಒದಗಿಸುತ್ತದೆ

 

ಈ ಯೋಜನೆಯಡಿಯಲ್ಲಿ ರೈತರು ಬಿತ್ತನೆಗೆ ಮೊದಲೇ ಬೆಳೆ ವಿಮೆ ಖರೀದಿಸಿ ಪ್ರೀಮಿಯಂ ಮೊತ್ತವನ್ನು ಕಟ್ಟಬೇಕು. ಬೆಳೆ ಆಧಾರದ ಮೇಲೆ ಈ ಪ್ರೀಮಿಯಂ ಮೊತ್ತವು ನಿಗದಿಯಾಗುತ್ತದೆ. ವಿಮೆಯನ್ನು ಖರೀದಿಸಿದ ನಂತರ ರೈತರು ತಮ್ಮಹೊಲದಲ್ಲಿ ಕೃಷಿ ಚಟುವಟಿಕೆಗಳನ್ನು ಎಂದಿನಂತೆ ಕೈಗೊಳ್ಳಬಹುದು. ಬೆಳೆಗೆ ಯಾವುದೇ ರೀತಿಯ ನೈಸರ್ಗಿಕ ವಿಪತ್ತುಗಳು ಅಥವಾ ರೋಗ, ಕೀಟ ಭಾದೆಯಿಂದ ನಷ್ಟ ಸಂಭವಿಸಿದ ಸಂಧರ್ಭದಲ್ಲಿ ರೈತರು ವಿಮೆ ಮಾಡಿದ ಮೊತ್ತವನ್ನು (ಸಮ್ ಅಶ್ಯೂರ್ಡ್) ಇನ್ಶೂರೆನ್ಸ್ ಕಂಪನಿಯಿಂದ ಪಡೆಯುತ್ತಾರೆ.

 

 

ಈ ವಿಮೆ ಹಣವನ್ನು ರೈತರು ತಾವು ಬಿತ್ತನೆ ಸಮಯದಲ್ಲಿ ಬಿತ್ತನೆ ಬೀಜಗಳು, ಗೊಬ್ಬರ ಇತ್ಯಾದಿ ಕೊಳ್ಳಲು ಮಾಡಿದ ಸಾಲವನ್ನು ತೀರಿಸಲು ಬಳಸಿಕೊಳ್ಳಬಹುದು ಮತ್ತು ಸಾಲ ಬಾಧೆಯಿಂದ ತಾವು ಮತ್ತು ತಮ್ಮ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಸಹ ತಡೆಗಟ್ಟಬಹುದು

 

 ಪಿಎಂಎಫ್‌ಬಿವೈ ಯೋಜನೆಯ ಮುಖ್ಯ ಉದ್ದೇಶಗಳು:

 •  ನೈಸರ್ಗಿಕ ವಿಪತ್ತು, ರೋಗ ಮತ್ತು ಕೀಟ ಬಾಧೆಯಿಂದ ಹಾನಿಗೊಳಗಾದ ಬೆಳೆಗೆ ವಿಮೆ ಮತ್ತು ರಕ್ಷಣೆ ಒದಗಿಸುವುದು
 •  ರೈತರ ಆದಾಯವನ್ನು ಸುಸ್ಥಿರಗೊಳಿಸುವುದು ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಿಗೆ ನಿರಂತರ ಸಾಲದ ಹರಿವನ್ನು ಒದಗಿಸುವುದು
 • ರೈತರಿಗೆ ಹೊಸ ಮತ್ತು ರೈತರಿಗೆ ಹೊಸ ಮತ್ತು ಸುಧಾರಿತ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು

 

ಈ ಯೋಜನೆಗೆ ಬೇಕಾಗಿರುವ ಅರ್ಹತಾ ಮಾನದಂಡಗಳು:

 • ರೈತರು ಭಾರತೀಯ ಪ್ರಜೆ ಮತ್ತು ನಿವಾಸಿಯಾಗಿರಬೇಕು
 • ಆಯಾ ಪ್ರದೇಶದ ಕೃಷಿ ಇಲಾಖೆ ತಿಳಿಸಿರುವ ಸೂಕ್ತ ಹವಾಮಾನಕ್ಕೆ ಬೆಳೆಯಬಹುದಾದ ಬೆಳೆಗಳನ್ನೇ ರೈತರು ಬೆಳೆಯಬೇಕು. ಇದರಿಂದ ರೈತರಿಗೆ ಕಡಿಮೆ ಬೆಳೆ ಹಾನಿ ಸಂಭವವಿರುತ್ತದೆ.
 • ಯೋಜನೆಯ ಅರ್ಜಿ ಸಲ್ಲಿಸಿದ ಹಾಗು ಬೆಳೆ ವಿಮೆ ಪ್ರೀಮಿಯಂ ಮೊತ್ತವನ್ನು ಕಟ್ಟಿದ ರೈತರು ಮಾತ್ರವೇ ಈ ಯೋಜನೆಯ ಫಲಾನುಭವಿಗಳಾಗುತ್ತಾರೆ. ನೈಸರ್ಗಿಕ ವಿಪತ್ತು, ಕೀಟ ಹಾಗು ರೋಗ ಭಾದೆಯ ನಷ್ಟದ ಸಂಧರ್ಭದಲ್ಲಿ ರೈತರು ಈ ವಿಮೆ ಹಣವನ್ನು ಪಡೆಯಬಹುದು
 • ಇತರ ಪ್ರಾಕೃತಿಕ ವಿಕೋಪಗಳಾದ ನೈಸರ್ಗಿಕ ಬೆಂಕಿ, ಬರ ಪರಿಸ್ಥಿತಿ, ಬಿರುಗಾಳಿ, ನೀರಿನಿಂದುಂಟಾಗುವ ಹಾನಿ, ಪ್ರವಾಹ, ಕೀಟಬಾಧೆ ಇವುಗಳಿಂದ ಸಂಭವಿಸುವ ಹಾನಿಗಳಿಗೂ ಸಹ ರೈತರು ಈ ವಿಮೆ ಹಕ್ಕನ್ನು ಪಡೆಯಬಹುದು.
 • ವಿಮೆಯಕಂತಿಗೆ ರೈತರ ಪಾವತಿಗಮನಾರ್ಹವಾಗಿ ಕಡಿಮೆಯಾಗಿದೆ, ರೈತರ ವಿಮೆ ಪಾವತಿಸುವ ಆಧಾರದ ಮೇಲೆ ವಿಮೆ ಕಂತನ್ನು ನಿಗದಿ ಮಾಡಲಾಗಿದೆ ಅಂದರೆ ವಾರ್ಷಿಕ ಮತ್ತು ವಾಣಿಜ್ಯ ಬೆಳೆಗಳಿಗೆ 5%, ಮುಂಗಾರು ಬೆಳೆಗಳಿಗೆ 2%, ಹಿಂಗಾರು ಬೆಳೆಗಳಿಗೆ 1.5%  
 • ಪರಮಾಣು ಅಥವಾ ಯುದ್ಧ ವಿಕಿರಣಗಳ ಅಪಾಯದಿಂದಾಗುವ ಬೆಳೆ ಹಾನಿ, ಗಲಭೆ, ಕಳ್ಳತನ ಅಥವಾ ಪ್ರಾಣಿಗಳ ಮೇಯುವಿಕೆಯಿಂದಾಗುವ ಬೆಳೆ ಹಾನಿಗೆ ಈ ಯೋಜನೆ ಒಳಪಡುವುದಿಲ್ಲ

 

 ರೈತರು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ

 • ಮೊದಲು ಯೋಜನೆಯ ವೆಬ್ಸೈಟ್ ಗೆ ಲಾಗಿನ್ ಆಗಿ
 • ನಂತರ ಅರ್ಜಿ ಸಲ್ಲಿಸುವ ವಿಭಾಗಕ್ಕೆ ಹೋಗಿ
 • ಅಲ್ಲಿಂದ ಅರ್ಜಿ ಸಲ್ಲಿಕೆಯ ಪುಟಕ್ಕೆ ಹೋಗಿ
 • ನಂತರದ ಪುಟದಲ್ಲಿ ಅಪ್ಲಿಕೇಶನ್ ವಿವರಗಳನ್ನು ತುಂಬಿರಿ (ವೈಯಕ್ತಿಕ ಹಾಗು ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಬೇಕು)
 • ನಂತರ ಕ್ಲಿಕ್ ಮತ್ತು ಉಳಿಸಿ ಗುಂಡಿಯನ್ನು ಒತ್ತಿ, ಜಮೀನಿನ ವಿವರಗಳನ್ನು ತುಂಬಬೇಕು
 • ತದ ನಂತರ ವಿಮೆ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕು. ಇದರ ನಂತರ ಒಂದು ಟ್ರಾಕಿಂಗ್ ಐಡಿಯನ್ನು ಕಂಪ್ಯೂಟರ್ ನೀಡುತ್ತದೆ ಮತ್ತು ಇದನ್ನು ನೀವು ಅರ್ಜಿಯ ಸ್ಥಿತಿಯನ್ನು ತಿಳಿಯಲು ಬಳಸಬಹುದು 

 

ಈ ಯೋಜನೆಯ ಮುಖ್ಯ ಉಪಯೋಗಗಳು:

 • ಅತಿ ಕಡಿಮೆ ಪ್ರೀಮಿಯಂ ದರದಲ್ಲಿ ರೈತರಿಗೆ ವಿಮೆ ಸೌಲಭ್ಯವನ್ನು ಒದಗಿಸುತ್ತದೆ
 • ರೈತರು ಅತಿ ಹೆಚ್ಚು ಬಡ್ಡಿ ದರದಲ್ಲಿ ದಳ್ಳಾಳಿಗಳಿಂದ ಪಡೆಯುವ ಸಾಲವನ್ನು ಕಡಿತಗೊಳಿಸಬಹುದು
 • ರೈತರಿಗೆ ಹಾಗು ಅವರ ಕುಟುಂಬದವರಿಗೆ ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತದೆ ಹಾಗು ಸಾಲ ಬಾಧೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆ ಮಾಡುತ್ತದೆ

 ಹೆಚ್ಚಿನ ವಿವರಗಳನ್ನು https://pmfby.gov.in/ ವೆಬ್ಸೈಟ್ ನಲ್ಲಿ ಪಡೆಯಬಹುದು

 

Curtesy: https://pmfby.gov.in/ 

 

 


Leave a comment

यह साइट reCAPTCHA और Google गोपनीयता नीति और सेवा की शर्तें द्वारा सुरक्षित है.