"RABI3" कोड का उपयोग करें और Rs. 4999/- से अधिक के खरीद पर 3% की छूट पायें         कोड "RABI5" कोड का उपयोग करें और Rs. 14999/- से अधिक के खरीद पर 5% की छूट पायें         Rs. 1199/- से अधिक के ऑर्डर पर मुफ्त डिलीवरी पायें      लॉकडाउन के कारण प्रसव में सामान्य से अधिक समय लग सकता है       सीमित अवधि ऑफर: सभी सरपान बीज पर 10% की छूट पायें । 5 खरीदें 1 मुफ़्त पाएं शेमरॉक कृषि उत्पादों पर

Menu
0

ಟೊಮ್ಯಾಟೊ ಬೆಳೆಯ ಪ್ರಾಣಾಂತಕ ಕೀಟ ಊಜಿ [ಟ್ಯೂಟಾ ಅಬ್ಸೊಲ್ಯೂಟ] ದ ಪರಿಣಾಮಕಾರಿ ಹತೋಟಿ

द्वारा प्रकाशित किया गया था Sanjeeva Reddy पर

          ಟೊಮ್ಯಾಟೊ ಬೆಳೆಯಲ್ಲಿ ಊಜಿ ದಾಳಿ

ಟೊಮ್ಯಾಟೊ ಬೆಳೆಯು ಭಾರತದ ರೈತರು ಹೆಚ್ಚು ಬೆಳೆಯುವ ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿಗೆ ಟೊಮ್ಯಾಟೊ ಬೆಳೆಗೆ ಊಜಿ [ಟ್ಯೂಟ ಅಬ್ಸಲೂಟ] ಕೀಟ ಹೆಚ್ಚು ಮಾರಕವಾಗಿ ರೈತರು ನಷ್ಟ ಅನುಭವಿಸುವಂತೆ ಮಾಡುತ್ತಿದೆ. ಊಜಿ ನೊಣವನ್ನು ದಕ್ಷಿಣ ಅಮೆರಿಕಾದ ಪಿನ್‌ವರ್ಮ್ ಎಂದೂ ಕರೆಯುತ್ತಾರೆ. ಊಜಿ ನೊಣ ಹಾವಳಿ ಬೆಳೆಯ ಎಲ್ಲಾ ಹಂತಗಳಲ್ಲೂ ಪ್ರಭಾವ ಬೀರುತ್ತದೆ.

                   ಟೊಮ್ಯಾಟೊ ಎಲೆಯಲ್ಲಿ ಊಜಿ ದಾಳಿ

ಈ ಊಜಿ ತನ್ನ ಜೀವನ ಚಕ್ರದ ಎಲ್ಲಾ ಹಂತಗಳಲ್ಲಿ, ಟೊಮ್ಯಾಟೊ ಗಿಡದ ಎಲೆಗಳು, ಹಣ್ಣುಗಳು ಮತ್ತು ಕಾಂಡಗಳ ಮೇಲೆಯೂ  ದಾಳಿ ಮಾಡುವ   ಶಕ್ತಿ ಹೊಂದಿದ್ದು, ಶೇಕಡ 100 % ಬೆಳೆ ನಷ್ಟ ಮಾಡುವ ಸಾಮರ್ಥ್ಯವಿದೆ. ಊಜಿ ನೊಣದ ಸಂತಾನೋತ್ಪತ್ತಿ ಸಾಮರ್ಥ್ಯವು ಹೆಚ್ಚು ಮತ್ತು ವಿಚಿತ್ರ ವೆಂದರೆ ಅನುಕೂಲಕರ ಪರಿಸ್ಥಿತಿಗಳಲ್ಲಿ ಈ ಊಜಿ ವರ್ಷದಲ್ಲಿ 10-12 ತಲೆಮಾರಗಳನ್ನು ಮಾಡುತ್ತದೆ.

                         ಊಜಿ ನೊಣದ ಆತಿಥೇಯ ಸಸ್ಯಗಳು

ಈ ನೊಣವು ಟೊಮ್ಯಾಟೊ ಸಸ್ಯಗಳನ್ನು ಮೊಳಕೆಗಳಿಂದ ಪ್ರಬುದ್ಧ ಸಸ್ಯಗಳವರೆಗೆ ದಾಳಿ ಮಾಡಬಹುದು. ಊಜಿ ನೊಣದ ಈ ಲಕ್ಷಣಗಳಿಂದ ರೈತರಿಗೆ ಊಜಿ ಹಾವಳಿಯನ್ನು ನಿಯಂತ್ರಿಸಲು ಕಷ್ಟವಾಗಿ ಅವರಿಗೆ ಇದು  ಒಂದು ಗಂಭೀರ ಕೀಟವಾಗಿಬಿಟ್ಟದೆ.

                ಟೊಮ್ಯಾಟೊ ಬೆಳೆಯಲ್ಲಿ ಊಜಿ ದಾಳಿ

ಸಂಯೋಜಿತ ಕೀಟ ನಿರ್ವಹಣೆ ಪದ್ದತಿಗಳನ್ನು ರೈತರು ಅನುಸರಿಸಿದರೆ ಮಾತ್ರ ಈ ಆಕ್ರಮಣಕಾರಿ ಊಜಿ [ಟ್ಯೂಟ ಅಬ್ಸಲೂಟ] ಕೀಟದ ಪರಿಣಾಮಕಾರಿ ನಿರ್ವಹಣೆ ಮಾಡಬಹುದಾಗಿದೆ. ಕೀಟದ ಎಲ್ಲ ಹಂತಗಳ ಬಗ್ಗೆ ಅರಿತು, ಎಲ್ಲಾ ಹಂತಗಳನ್ನು ನಾಶ ಪಡಿಸಿದರೆ ಹಾವಳಿ ಕಡಿಮೆ ಮಾಡಬಹದು.

                         ಟ್ಯೂಟಾ ಅಬ್ಸೊಲ್ಯೂಟ ಊಜಿ ನೊಣದ ಜೀವನ ಚಕ್ರ

ಊಜಿ ನೊಣದ ಆತಿಥೇಯ ಸಸ್ಯಗಳು:

ಟೊಮ್ಯಾಟೊ , ಆಲೂಗಡ್ಡೆ ಬದನೇಕಾಯಿ, ಬೀನ್ಸ್  ಕಾಳು ಮೆಣಸು, ಮತ್ತು ತಂಬಾಕು ಬೆಳೆಗಳ ಮೇಲೆ ಇದರ ಹಾವಳಿ ಇರುತ್ತದೆಯಾದರೂ ಟೊಮ್ಯಾಟೊ ಬೆಳೆಯನ್ನು ಹೆಚ್ಚಾಗಿ ಆಕ್ರಮಿಸುತ್ತದೆ. 

           ಊಜಿ ನೊಣದ ಆತಿಥೇಯ ಸಸ್ಯಗಳು   ಊಜಿ ನೊಣದ ಆತಿಥೇಯ ಸಸ್ಯಗಳು 

ಊಜಿ ನೊಣದ  ಜೀವನ ಚಕ್ರ:

ಮೊಟ್ಟೆ: ಅವಧಿ- 7 ದಿನಗಳು.

              ಟ್ಯೂಟಾ ಅಬ್ಸೊಲ್ಯೂಟ ಊಜಿ ನೊಣದ ಮೊಟ್ಟೆ

ಮೊಟ್ಟೆಗಳು ಕೆನೆ ಬಿಳಿ ಮಿಶ್ರಿತ ಹಳದಿ ಬಣ್ಣದಿಂದ ಕೂಡಿದ್ದು ಮತ್ತು ಅಂಡಾಕಾರದಲ್ಲಿರುತ್ತವೆ. ಮೊಟ್ಟೆಗಳು 0.35 ಮಿ.ಮೀ ಉದ್ದವಿರುತ್ತವೆ. ಊಜಿ ನೊಣವು ಸಾಮಾನ್ಯವಾಗಿ ಎಲೆಗಳು, ಮೊಗ್ಗುಗಳು, ಕಾಂಡಗಳು ಮತ್ತು ಎಳೆ ಹಣ್ಣುಗಳ ತೊಟಗಳು [ಕ್ಯಾಲಿಕ್ಸ್‌ನ] ಕೆಳಗೆ ಮೊಟ್ಟೆಗಳನ್ನು ಇಡುತ್ತದೆ.

ಊಜಿ ಹುಳುಗಳು [ಲಾರ್ವಾ]: ಅವಧಿ-11 ದಿನಗಳು

              ಟ್ಯೂಟಾ ಅಬ್ಸೊಲ್ಯೂಟ ಊಜಿ ನೊಣದ ಹುಳುಗಳು

ಊಜಿ ಹುಳುಗಳು [ಲಾರ್ವಾ] ಕಂದು ಬಣ್ಣದ್ದಾಗಿದ್ದು ಅವುಗಳ ತಲೆಗಳು ಕಪ್ಪು ಬಣ್ಣದಲ್ಲಿರುತ್ತವೆ. ಹುಳುಗಳು  ಎರಡನೆ ಹಂತದಲ್ಲಿ ಹಸಿರು ಬಣ್ಣದಿಂದ  ನಾಲ್ಕನೇ ಹಂತ ತಲುಪುದರಲ್ಲಿ  ಹಸಿರು ಬಣ್ಣದಿಂದ ತಿಳಿ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.  ಮದಲನೆ ಹಂತದ ಹುಳುವಿನ ಉದ್ದ 0.9 ಮಿ.ಮೀ. ವಿದ್ದು  ನಾಲ್ಕನೇ ಹಂತದಲ್ಲಿ  7.5 ಮಿ.ಮೀ. ರವರೆಗೆ ಬೆಳೆಯುತ್ತದೆ. ಮೊಟ್ಟೆಯೊಡೆದ ನಂತರ, ಊಜಿ ಮರಿಹುಳುಗಳು ತಕ್ಷಣ ಸಸ್ಯ ಅಂಗಾಂಶವನ್ನು ಭೇದಿಸಿ ಒಳಗೆ ನುಸುಳಿ ತಿನ್ನಲಾರಂಭಿಸುತ್ತವೆ. ಊಜಿ ಹುಳುಗಳು ನಾಲ್ಕನೇ ಹನ್ತಘಾ ಮುಗಿದ ನಂತರ ರೇಷ್ಮೆ ದಾರದ ಮಾದರಿಯ ತಂತಿಯನ್ನು ತಯಾರಿಸಿ ಅದರ ಸಹಾಯದಿಂದ ನೆಲಕ್ಕೆ ಬಿದ್ದು ಕೋಶಾವಸ್ಥೆ ಜೀವನವನ್ನು ಮುಂದುವರೆಸುತ್ತದೆ.

ಊಜಿ ನೊಣದ ಕೋಶ [ಪ್ಯೂಪಾ] : ಅವಧಿ-5 ದಿನಗಳು

        ಟ್ಯೂಟಾ ಅಬ್ಸೊಲ್ಯೂಟ ಊಜಿ ನೊಣದ  ಕೋಶ

ಊಜಿ ನೊಣದ ಕೋಶ [ಪ್ಯೂಪಾ]ಗಳು ಮೊದಲೇ ಹೇಳಿದ ಹಾಗೆ ಸಾಮಾನ್ಯವಾಗಿ ಮಣ್ಣಿನಲ್ಲಿ ತನ್ನ ಅವಸ್ಥೆಯನ್ನು ಮುಗಿಸುತ್ತದೆ.  ಊಜಿ ನೊಣದ ಕೋಶ 6 ಮಿ. ಮೀ .ಉದ್ದ  ಮತ್ತು ಕಂದು ಬಣ್ಣ ಹೊಂದಿರುತ್ತವೆ. ಊಜಿ ನೊಣದ ಕೋಶ [ಪ್ಯೂಪ] ಗಳು ಕೆಲವೊಮ್ಮೆ ಎಲೆ ಗಳ ಮೇಲೆ,  ಸಾಂದರ್ಭಿಕವಾಗಿ ಹೂಗಳು, ಹಣ್ಣುಗಳು ಮತ್ತು ಕಾಂಡಗಳ ಮೇಲೆಯೂ ಕಂಡುಬರುತ್ತವೆ.

ವಯಸ್ಕ ಊಜಿ ನೊಣ : ಅವಧಿ: ಹೆಣ್ಣು ಕೀಟ- 10-15 ದಿನಗಳವರೆಗೆ ಮತ್ತು ಗಂಡು ಕೀಟ 6-7 ದಿನಗಳವರೆಗೆ ಜೀವಿಸುತ್ತದೆ.

         ಟ್ಯೂಟಾ ಅಬ್ಸೊಲ್ಯೂಟ ವಯಸ್ಕ ಊಜಿ ನೊಣ

ವಯಸ್ಕ ಊಜಿ ನೊಣಗಳು 5 ದಿನಗಳ ಕೋಶವಾಸ್ಥೆ ಮುಗಿಸಿ ನಂತರ ನೊಣವಾಗಿ  ರೂಪಾಂತರಗೊಂಡು ಹಾರಲಾರಂಭಿಸುತ್ತವೆ.  ಊಜಿ ನೊಣಗಳು ದೇಹದ ಉದ್ದ -7 ಮಿ.ಮೀ. ಇರುತ್ತದೆ. ನೊಣಗಳು ಕಂದು ಅಥವಾ ಬೆಳ್ಳಿಯ ಬಣ್ಣವಾಗಿದ್ದು ರೆಕ್ಕೆಗಳ ಮೇಲೆ ಕಪ್ಪು ಕಲೆಗಳಿರುತ್ತವೆ. ಊಜಿ ನೊಣಗಳು ರಾತ್ರಿಯ ವೇಳೆಯಲ್ಲಿ ಕೀಟಗಳು ಸಕ್ರಿಯವಾಗಿರುತ್ತವೆ ಹಾಗು ಹಗಲಿನ ವೇಳೆಯಲ್ಲಿ ಅವು ಎಲೆಗಳ ನಡುವೆ ಅಡಗಿಕೊಳ್ಳುತ್ತವೆ.

ಊಜಿ ನೊಣಗಳು ಹಾನಿಯ ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳು:

ಎಲೆಗಳ ಮೇಲೆ

ಊಜಿ ಹುಳುಗಳು [ಲಾರ್ವಾ] ಮೊಟ್ಟೆಯೊಡೆದ ನಂತರ, ಊಜಿ ಮರಿಹುಳುಗಳು ತಕ್ಷಣ ಎಲೆಗಳ ಒಳಗೆ ನುಸುಳಿ ಕೊರೆಯುತ್ತಾ ದೊಡ್ಡ ಎಲೆಗಳ ಒಳಗೆ ಸುರಂಗಗಳನ್ನು ಮಾಡುತ್ತವೆ. ಎಲೆಗಳ ಮೇಲ್ಮೈಯಲ್ಲಿ ಲೆಕ್ಕವಿಲ್ಲದಷ್ಟು ತೇಪೆಗಳನ್ನು ಹಾಕಿದ ಹಾಗೆ ಮಾಡುತ್ತವೆ.

            ಟ್ಯೂಟಾ ಅಬ್ಸೊಲ್ಯೂಟ ಊಜಿ ನೊಣ ಟೊಮೇಟೊ ಎಲೆ  ಮೇಲೆ ದಾಳಿ 

ಸಾಮಾನ್ಯವಾಗಿ ಊಜಿ ನೊಣಗಳು ಮೊಗ್ಗಿನ ತುದಿ, ಕಾಂಡ, ಹೂವು ಮತ್ತು ಹಣ್ಣುಗಳ ಮೇಲೆ ಮುತ್ತಿಕೊಳ್ಳುವಿಕೆ ಕಂಡು ಬರುತ್ತದೆ, ಇದರ ಪ್ರಬಾವದಿಂದ ಸಸ್ಯದ ಎಲ್ಲಾ ಭಾಗಗಳ ಮೇಲೆ ನುಣ್ಣನೆಯ ಕಪ್ಪು ಪುಡಿ ಗೋಚರಿಸುತ್ತದೆ.

ಹಣ್ಣು ಮತ್ತು ಕಾಂಡಗಳ ಮೇಲೆ

ಹಣ್ಣುಗಳನ್ನು ಊಜಿ ಹುಳುಗಳ ಚ್ಚುಚ್ಚವಿಕೆಯ ಪಂಕ್ಚರ್ ಗುರುತುಗಳು ಕಾಣಬಹುದು.ಊಜಿ ನೊಣ ಭಾದಿತ ಟೊಮ್ಯಾಟೊ ಸಸಿಯಲ್ಲಿ ಆಕಾರವಿಲ್ಲದ  ಹಣ್ಣುಗಳು, ಹಣ್ಣುಗಳಿಂದ ಹುಳು ಹೊರ ಬಂದಿರುವ ರಂದ್ರಗಳು, ಊಜಿ  ಹುಳುಗಳು ಹಣ್ಣಿನ ಅಂಗಾಂಶವನ್ನು ತಿಂದು ಜೀರ್ಣಿಸಿದ ನಂತರ ತ್ಯಾಜ್ಯವಾಗಿ ಹೊರಬಿಡುವ ಸೂಕ್ಷ್ಮ/ ನುಣ್ಣನೆಯ ಪುಡಿ ಹಣ್ಣುಗಳ ಗುಣಮಟ್ಟವನ್ನು ಕಡಿಮೆಮಾದಿರುವುದನ್ನು ಕಾಣಬಹುದು.

           ಟ್ಯೂಟಾ ಅಬ್ಸೊಲ್ಯೂಟ ಊಜಿ ನೊಣ ಟೊಮೇಟೊ ಹಣ್ಣುಗಳ ಮೇಲೆ ದಾಳಿ

 

ಊಜಿ ನೊಣದ ನಿರ್ವಹಣೆ ಕ್ರಮಗಳು:

ವ್ಯಾವಸಾಯಿಕ ಪದ್ದತಿ

  • ಹಿಂದಿನ ಬೆಳೆ ಉಳಿಕೆಗಳನ್ನು ಮತ್ತು ಪರ್ಯಾಯ ಆತಿಥೇಯ ಬೆಳಗಳನ್ನು ಪ್ರಸ್ತುತ ಬೆಳೆಯ ಸಮೀಪದಿಂದ ತೆಗೆಯಬೇಕು.

          ಕಾಡಿನಲ್ಲಿ ಬೆಳೆಯುವ ಟೊಮ್ಯಾಟೊ ಜಾತಿಯ ಕಳೆಗಳು

  • ಊಜಿ ನೊಣವನ್ನು ನಿಯಂತ್ರಿಸಲು ತನ್ನ ಸ್ವಜಾತಿಯ [ಸೋಲನೇಶಿಯಸ್] ಅಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡುವುದು, ಸಾಕಷ್ಟು ನೀರಾವರಿ ಮತ್ತು ಪೋಷಕಾಂಶಗಳ ನಿರ್ವಹಣೆ, ಊಜಿ ಕೀಟ ಮುತ್ತಿದ ಸಸ್ಯಗಳನ್ನು ತೆಗೆಯುವುದು, ಕಟಾವು  ನಂತರದ ಸಸ್ಯ ಪಳಿಯುಳಿಕೆ ಮತ್ತು ಹಣ್ಣುಗಳನ್ನು ಸಂಪೂರ್ಣವಾಗಿ ತೆಗೆಯಬೇಕು.

                            ಬೆಳೆ ಪರಿವರ್ತನೆ ನಿರ್ವಹಣೆ ಪದ್ದತಿಯಲ್ಲಿ ಟ್ಯೂಟಾ ಅಬ್ಸೊಲ್ಯೂಟ ಊಜಿ ನೊಣ ನಿರ್ವಹಣೆ

  • ಬೆಳೆ ಮಾಡುತ್ತಿರುವ ಪ್ರದೇಶದ ಸಮೀಪ ಕಾಡು ಸ್ವಜಾತಿಯ ಆತಿಥೇಯ ಸಸ್ಯಗಳನ್ನು ತೆಗೆಯುವುದು ಸಹ ಪರಿಣಾಮಕಾರಿಯಾಗಿದೆ, ಏಕೆಂದರೆ ಇವು ಉಜಿಗಳ ಎಲ್ಲಾ ಹಂತಗಳನ್ನು ಆತಿಥ್ಯ ವಹಿಸುತ್ತವೆ, ಅದು ನಂತರ ಬೆಳೆಯುತ್ತಿರುವ ಬೆಳೆಯನ್ನು ಮತ್ತೆ ಆಕ್ರಮಣ ಮಾಡಬಹುದು.

ಯಾಂತ್ರಿಕ ಪದ್ದತಿ

  • ಊಜಿ ನೊಣಗಳು ಕೋಶಾವಸ್ಥೆಯಿಂದ ರೂಪಾಂತರ ಗೊಂಡ ನಂತರ ಗಂಡು ಹೆಣ್ಣು ಸೇರಬೇಕು, ಸೇರುವ ಹೆಣ್ಣು ನೊಣ ಆಕರ್ಷಕ ದ್ರವ್ಯ ವನ್ನು ಬಿಡುಗಡೆ ಮಾಡಿ ಗಂಡು ನೊಣವನ್ನು ತನ್ನ ಬಳಿ ಆಕರ್ಷಿಸುತ್ತದೆ.
  • ಊಜಿ ನೊಣದ ಈ ನಡತೆಯನ್ನು ಗಮನದಲ್ಲಿರಿಸಿಕೊಂಡು ಕೃತಕ ಆಕರ್ಷಕಗಳನ್ನು [ಆಕರ್ಷಕ ಬಲೆ - ಫೆರೋಮೋನ್ ಬಲೆ- Pheromone traps] ಬಳಸಿ ಗಂಡು ನೊಣಗಳನ್ನು ಒಂದು ಕಡೆ ಆಕರ್ಷಿಸಿ ಹೆಣ್ಣು ನೊಣ ದೊಂದಿಗೆ ಸೇರಲು ಅವಕಾಶಕೊಡದೆ ಕೊಲ್ಲುವ ವಿಧಾನವನ್ನು ಅಳವಡಿಸಬಹುದು.

               ಟ್ಯೂಟಾ ಅಬ್ಸೊಲ್ಯೂಟ ನೊಣದ ಆಕರ್ಷಕ ಬಲೆಗಳು

  • ಹೆಣ್ಣು ನೊಣಕ್ಕೆ ಮೊಟ್ಟೆಯಿಡಲು ಕಡಿಮೆ ಸಮಯವಿರುವುದರಿಂದ ಗಂಡು ನೊಣದೊಡನೆ ಸಂಭೋಗ ವಿಲ್ಲದೆ ಮೊಟ್ಟೆ ಇಟ್ಟರೂ ಆ ಮರಿಯಾಗುವುದಿಲ್ಲ. ಆಗ ಉಜಿಯ ಹಾವಳಿ ಕಡಿಮೆ ಯಾಗುತ್ತದೆ.
  • ಮೊದಲೇ ಹೇಳಿದಂತೆ ಊಜಿ ನೊಣಗಳು ರಾತ್ರಿಯ ವೇಳೆ ಹೆಚ್ಚು ಸಕ್ರಿಯ ವಾಗಿರುವುದರಿಂದ, ಈ ಆಕರ್ಷಕ ಬಲೆಗಳನ್ನು ವಿದ್ಯುತ್ ದೀಪ [ಲೈಟ್ ಟ್ರ್ಯಾಪ್] ನ ಸಹಾಯವನ್ನು ಕೊಟ್ಟರೆ ಹೆಚ್ಚು ಪರಿಣಾಮಕಾರಿ.

                      ಟ್ಯೂಟಾ ಅಬ್ಸೊಲ್ಯೂಟ ನೊಣದ ಆಕರ್ಷಕ ಮತ್ತು ಬೆಳಕು ಬಲೆಗಳು

  • ಫೆರೋಮೋನ್ ಬಲೆಗಳ ಬಳಕೆಯು ಊಜಿ ನೊಣದ ಇರುವಿಕೆಯನ್ನೂ ಕಂಡುಹಿಡಿಯಲು ಅನುಕೂಲವಾಗುತ್ತದೆ ಮತ್ತುಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಧರಿಸಲು ಸಹಾಯ ವಾಗುತ್ತದೆ. ನೊಣದ ದಾಳಿ ಮತ್ತು ಪ್ರಭಾವ ಗಂಭೀರವಾಗುವುದಕ್ಕಿಂತ ಮುಂಚಿತವಾಗಿ ನಿಯಂತ್ರಿಸಲು ರೈತರನ್ನು ಎಚ್ಚರಿಸುತ್ತದೆ.
  • ಇನ್ಕ್ಯಾಂಡೆಸೆಂಟ್ ಬಲ್ಬ್ @ ಒಂದು ಬಲ್ಬ್ / 150 ಚಮೀ + 1 ಆಕರ್ಷಕ ಬಲೆ - ಫೆರೋಮೋನ್ ಬಲೆ[Pheromone traps] / 300 ಚಮೀ.

ರಾಸಾಯನಿಕ ನಿಯಂತ್ರಣ:

ಮೊಟ್ಟೆ ಮತ್ತು ಲಾರ್ವಾಗಳನ್ನು ನಿರ್ಮೂಲನೆ ಮಾಡಲು,

ಬೇವಿನ ಎಣ್ಣೆ[ಎಕೋನೀಮ್ ಪ್ಲಸ್ 1%  OR  ನೀಮಾರ್ಕ್ 1%] - 1 ಮೀ.ಲೀ  / ಲೀ + ಟ್ರಾನ್ಸ್ಲ್ಯಾಮಿನಾರ್ ಕ್ರಿಯೆಯ ವಿಧಾನದ ಕೀಟನಾಶಕಗಳು   ಎಕಲಕ್ಸ್ 2 ಮೀ.ಲೀ  / ಲೀ  ಅಥವಾ  ಅಬಾಸಿನ್ 1 ಮೀ.ಲೀ  / ಲೀನೀರಿಗೆ ಬೆರಿಸಿ ಸಿಂಪಂಡನೆ ಮಾಡಬೇಕು  

                    ಟ್ಯೂಟಾ ಅಬ್ಸೊಲ್ಯೂಟ ನೊಣದ ರಾಸಾಯನಿಕ ನಿರ್ವಹಣೆ

ಬೆಳೆ ಹಂತದಲ್ಲಿ 20 ರಿಂದ 25 ದಿನಗಳವರೆಗೆ ಎಕರೆಗೆ 200 ಎಂ.ಎಲ್. ಡುಪಾಂಟ್ ಬೆನೆವಿಯಾ ಸಿಂಪಡಿಸಿ.

                   ಟ್ಯೂಟಾ ಅಬ್ಸೊಲ್ಯೂಟ ನೊಣದ ರಾಸಾಯನಿಕ ನಿರ್ವಹಣೆ

ಊಜಿ ನೊಣದ ಕೋಶಗಳು [ಪ್ಯೂಪಗಳ]ಅವುಗಳನ್ನು ನಿರ್ಮೂಲನೆ ಮಾಡಲು ಹವೀಕಾರಕ ಮತ್ತು ಅಂತರ್ವ್ಯಾಪಿ ಕೀಟನಾಶಕಗಳನ್ನು ಮಣ್ಣಿಗೆ ಸಿಂಪಡಿಸಬಹುದು

[ಪ್ರಿಡೇಟರ್ ಅಥವಾ ಡರ್ಮೆಟ್] 3 ಮೀ.ಲೀ  / ಲೀ.

                   ಟ್ಯೂಟಾ ಅಬ್ಸೊಲ್ಯೂಟ ನೊಣದ ರಾಸಾಯನಿಕ ನಿರ್ವಹಣೆ            ಟ್ಯೂಟಾ ಅಬ್ಸೊಲ್ಯೂಟ ನೊಣದ ರಾಸಾಯನಿಕ ನಿರ್ವಹಣೆ

ಜೊತೆಗೆ ಕಾರ್ಟಾಪ್ ಹೈಡ್ರೋಕ್ಲೋರೈಡ್ 4% [ಕ್ಯಾಲ್ಡಾನ್] ಎಕರೆಗೆ 5 ಕೆಜಿ ಮಣ್ಣಿಗೆ ಸೇರಿಸಿ.

                             ಟ್ಯೂಟಾ ಅಬ್ಸೊಲ್ಯೂಟ ನೊಣದ ರಾಸಾಯನಿಕ ನಿರ್ವಹಣೆ

ಊಜಿ ನೊಣಗಳನ್ನು ನಿರ್ವಹಣೆ ಮಾಡಲು  ಕೆಳಗಿನ ಮಿಶ್ರಣವನ್ನು ಸಿಂಪಡಿಸಿ -

ಲ್ಯಾಂಬ್ಡಾಸೈಹಲೋಥ್ರಿನ್ [ಕರಾಟೆ] 2 ಮೀ.ಲೀ  / ಲೀ + ಬೇವಿನ ಎಣ್ಣೆ [ಎಕೋನೀಮ್ ಪ್ಲಸ್ 1%  OR  ನೀಮಾರ್ಕ್ 1%]] 1 ಮೀ.ಲೀ  / ಲೀ OR

                    ಟ್ಯೂಟಾ ಅಬ್ಸೊಲ್ಯೂಟ ನೊಣದ ರಾಸಾಯನಿಕ ನಿರ್ವಹಣೆ

ಡೈನಿಟಾಫೆರೊನ್ [ಓಶಿನ್ ಅಥವಾ ಟೋಕನ್] 0.5  ಗ್ರಾಂ / ಲೀ

                  ಟ್ಯೂಟಾ ಅಬ್ಸೊಲ್ಯೂಟ ನೊಣದ ರಾಸಾಯನಿಕ ನಿರ್ವಹಣೆ

                -----------------****************--------------------

ಹೆಚ್ಚಿನ ಮಾಹಿತಿಗೆ ಕಛೇರಿ ಸಮಯದಲ್ಲಿ 8050797979 ಗೆ ಕರೆ ಮಾಡಿ  ಅಥವಾ 180030002434 ಗೆ ಮಿಸ್ಡ್ ಕಾಲ್ ನೀಡಿ.    8050797979 ಗೆ  ವಾಟ್ಸಾಪ್ ಕೂಡ ಮಾಡಬಹುದು 

                                 ***

K SANJEEVA REDDY,

LEAD Agronomist, BigHaat.

---------------------------------------------------------------------------                                       Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.


इस पोस्ट को साझा करें



← पुराना पोस्ट नई पोस्ट →


एक कमेंट छोड़ें