ಬಿ.ಟಿ. ಹತ್ತಿ ಬೆಳೆಯಲ್ಲಿ ಪ್ರಮುಖ ಕೀಟಗಳು ಮತ್ತು ನಿರ್ವಹಣೆ

    Insects and Cotton

ಹತ್ತಿ ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಹತ್ತಿ ಬೆಳೆ ಉತ್ಪಾದನಾ ಅವಧಿಯಲ್ಲಿ ವಿವಿಧ ರೀತಿಯ ಕೀಟಗಳ ಹಾವಳಿಗೆ ಒಳಗಾಗುತ್ತದೆ . ಜಿಗಿ ಹುಳು [ಜಾಸಿಡ್ಸ್], ಥ್ರಿಪ್ಸ್ ನುಸಿ, ಸಸ್ಯಹೇನು ಮತ್ತು ಬಿಳಿನೊಣಗಳು ರಸ ಹೀರುವ ಕೀಟಗಳು ಮತ್ತು ಕಾಯಿಕೊರಕ(ಅಮೆರಿಕನ್ ಮತ್ತು ನುಸುಗೆಂಪು) ಮತ್ತು ಕತ್ತರಿ ಹುಳು [ಸ್ಪೊಡೋಪ್ಟೆರಾ] ಕೀಟಗಳು ಎಲೆಗಳ ಹಾಗೂ ಕಾಯಿಗಳ ಮೇಲೆ ಹಾವಳಿ ಮಾಡುತ್ತವೆ .

        Red cotton bugs on cotton

ಅಮೆರಿಕನ್ ಬೊಲ್ವರಂ  ಕಾಯಿಕೊರಕಗಳ ಹಾವಳಿಯಿಂದ ಸುಮಾರು 40 -50% ರಷ್ಟು ಬೆಳೆ ನಷ್ಟ ಉಂಟಾಗಬಹುದು. ಕಾಯಿಕೊರಕ ಹುಳಗಳು ಕೀಟನಾಶಕಗಳಿಗೆ ರೋಗ  ನಿರೋಧಕ ಶಕ್ತಿಯನ್ನು ಹೊಂದಿರುವುದು ಸವಾಲಿನ ಸಂಗತಿಯಾಗಿದೆ ಮತ್ತು ವೈಜ್ಞಾನಿಕ ಸಂಶೋಧನೆಯು ಬಿಟಿ ಹತ್ತಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜೀವಾಂತರ ಹತ್ತಿ ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸಿದೆ.

         Cotton Insects

ಬಿಟಿ ಹತ್ತಿ ಮಿಶ್ರತಳಿಗಳು ಅಮೆರಿಕನ್ ಕಾಯಿಕೊರಕಗಳ  ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಿವೆ ಮತ್ತು ಈ ಕಾಯಿಕೊರಕವನ್ನು ನಿಯಂತ್ರಿಸಲು ಹತ್ತಿ ಬೆಳೆಯ ಮೇಲೆ ಕೀಟನಾಶಕಗಳನ್ನು ಬಳಸಬೇಕಾಗಿಲ್ಲ.

ಬಿ.ಟಿ. ಹತ್ತಿಯ ಪ್ರಮುಖ ಕೀಟಗಳು

1.ಅಮೆರಿಕನ್ ಕಾಯಿಕೊರಕ (ಹೆಲಿಕೋವರ್ಪ ಆರ್ಮಿಜೆರಾ) - American bollworm

ಈ ಕಾಯಿಕೊರಕಗಳು ಕಾಯಿಗಳನ್ನು ಕೊರೆದು, ಕಾಯಿಯ ಒಳಭಾಗವನ್ನು ಮತ್ತು ಬೆಳೆಯುತ್ತಿರುವ ಬೀಜಗಳನ್ನು ತಿನ್ನುತ್ತವೆ. ಕಾಯಿ ಕೊರಕಗಳ ಹಾವಳಿಯಲ್ಲಿ ಹುಳುಗಳ ತಲೆ ಕಾಯಿಗಳ ಒಳಗೆ ಇರುತ್ತದೆ ಮತ್ತು ದೇಹವು ಹೊರಗಿರುತ್ತದೆ. ಹಿಕ್ಕು ಉಂಡೆಗಳು ಕಾಯಿಗಳ ಮೇಲೆ ಕಾಣುತ್ತವೆ.

  American boll worm on cotton

ಪ್ರತೀ ಗಿಡದಲ್ಲಿ ಅಮೆರಿಕನ್ ಕಾಯಿಕೊರಕಗಳ ಹಾವಳಿಯಿಂದ  30 - 40 ಕಾಯಿಗಳು  ಹಾನಿಗೊಳಗಾಗಬಹುದು. ಬಿ.ಟಿ. ಹತ್ತಿ ತಳಿಗಳಲ್ಲಿ ಈ ಹೆಲಿಕೋವರ್ಪ ಆರ್ಮಿಜೆರಾ ಅಥವಾ ಅಮೆರಿಕನ್ ಕಾಯಿಕೊರಕ ಕನಿಷ್ಠ ದಾಳಿಯು ಕಂಡುಬರುತ್ತದೆ.

  1. ಗುಲಾಬಿ ಬಣ್ಣ ಕಾಯಿಕೊರಕ(ಪೆಕ್ಟಿನೊಫೊರ ಗಾಸಿಪಿಎಲ್ಲಾ) Pink bollworm

ಗುಲಾಬಿ ಬಣ್ಣಕಾಯಿಕೊರಕ ಹಾನಿಯ ಲಕ್ಷಣವು   ಅಮೆರಿಕನ್ ಕಾಯಿಕೊರಕವನ್ನು ಹೋಲುತ್ತದೆ. ಗುಲಾಬಿ ಬಣ್ಣ ಕಾಯಿಕೊರಕ ಪುಷ್ಪ ಪತ್ರಗಳ ಮೇಲೆ ದಾಳಿ ಮಾಡಿ  ಅಂಕು ಡೊಂಕು ಆಕಾರ ಮಾಡುತ್ತದೆ. ಹುಳುಗಳು ಕಾಯಿಗಳ ಅಂಗಾಶ , ಬೀಜದ ಕಾಳುಗಳು ತಿಂದು ನಾಶ ಮಾಡುತ್ತದೆ ಮತ್ತು ಪ್ರವೇಶ ರಂಧ್ರಗಳನ್ನು ಹಿಕ್ಕು ವಸ್ತುಗಳಿಂದ ಮುಚ್ಚಿರುತ್ತವೆ.

   pink boll worm

ಗುಲಾಬಿ ಬಣ್ಣ ಕಾಯಿಕೊರಕ ದಾಳಿಯಿಂದ ಹತ್ತಿ ಕಾಯಿಗಳು ಬಲಿಯುವ ಮುನ್ನವೇ ಉದುರುವುದು ಸಾಮಾನ್ಯ ವಾಗಿರುತ್ತದೆ.

ಆಕರ್ಷಕ ಬೆಳೆ ಬಲೆ: ಗುಲಾಬಿ ಬಣ್ಣ ಕಾಯಿ ಕೊರಕದ ಹತೋಟಿಗೆ ಆಕರ್ಷಕ ಬೆಳೆಯಾಗಿ ಬಿಟಿ ಹತ್ತಿ ತಳಿಗಳಲ್ಲದ ಅಲ್ಲದ ಸಾಮಾನ್ಯ ಹತ್ತಿ ತಳಿ ಬೀಜಗಳನ್ನು ಗಡಿಯಲ್ಲಿ ಐದು ಸಾಲುಗಳ ಬಿತ್ತಬಹುದು ಮತ್ತು ಈ ಸಸ್ಯಗಳು ಗುಲಾಬಿ ಬಣ್ಣ ಕಾಯಿಕೊರಕಗಳನ್ನು  ಆಕರ್ಷಿಸುತ್ತವೆ.

         Bt and Non Bt

ಇಲ್ಲಿ ಗುಲಾಬಿ ಬಣ್ಣ ಕಾಯಿಕೊರಕಗಳ ಸಂಖ್ಯೆಯು ಬಿಟಿ ಹತ್ತಿ ತಳಿಗಳಲ್ಲದ ಸಸ್ಯಗಳ ಮೇಲೆ ಆಕರ್ಷಣೆ  ಹೆಚ್ಚಾಗಿರುತ್ತದೆ ಮತ್ತು ಮುಖ್ಯ ಬಿಟಿ ಪ್ರಭೇದ   ತಳಿಗಳಲ್ಲಿ ಕನಿಷ್ಠ ದಾಳಿ ಸಂಭವಿಸುತ್ತದೆ.

  1. ತಂಬಾಕು ಹುಳ (ಸ್ಪೊಡೋಪ್ಟೆರಾ ಲಿಟುರಾ ಫ್ಯಾಬ್.) Tobacco caterpillars

ಸ್ಪೊಡೋಪ್ಟೆರಾ ಲಿಟುರಾ(ತಂಬಾಕು ಹುಳು) ಪತಂಗಗಳು ಸಸ್ಯಗಳ ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ, ಹುಳಗಳು ಹೊರ ಬಂದು  ಎಲೆಗಳನ್ನು ತಿಂದು ಜಾಲರಿಯಂತೆ ಮಾಡುತ್ತವೆ. ಹುಳಗಳ ತೀವ್ರ  ಹಾವಳಿಯಿಂದ ಒಟ್ಟು ವಿಪರ್ಣನಕ್ಕೆ (ಎಲ್ಲಾ ಎಳೆಗಳು ಉದುರುವುದು) ಕಾರಣವಾಗಬಹುದು.

     Tobacco caterpillars on cotton

 ಇತ್ತೀಚೆಗೆ ಮತ್ತೊಂದು ಜಾತಿಯ ಸ್ಪೊಡೊಪ್ಟೆರಾ, ಸೈನಿಕ  ಹುಳು ಸ್ಪೊಡೊಪ್ಟೆರಾ ಫ್ರುಜಿಪೆರ್ಡಾ ಬಹಳ ಗಂಭೀರವಾದ ಕೀಟವಾಗಿ ಮಾರ್ಪಟ್ಟಿದೆ, ಇದು ಸಣ್ಣ ಹತ್ತಿ ಸಸ್ಯಗಳನ್ನು ಕತ್ತರಿಸುವುದರ  ಜೊತೆಗೆ ತೀವ್ರ ಹಾನಿ ಉಂಟುಮಾಡುತ್ತದೆ .

  1. ಚುಕ್ಕೆ ಕಾಯಿಕೊರಕ (ಇರಿಯಾಸ್ ಇನ್ಸುಲಾನಾ ಮತ್ತು ಇರಿಯಾಸ್ ವಿಟೆಲ್ಲಾ ಫ್ಯಾಬ್.) Spotted bollworm

ಚುಕ್ಕೆ ಸಹಿತ  ಕಾಯಿಕೊರಕ  ಹುಳಗಳು  ಹತ್ತಿಯ ಹೂವುಗಳ, ಕಾಯಿಗಳ  ಮತ್ತು ಕೆಲವೊಮ್ಮೆ ಚಿಗುರುಗಳ ಮೇಲೆ ನೇರವಾಗಿ ಹಾವಳಿ  ಮಾಡುತ್ತವೆ. ಈ ಕಾಯಿಕೊರಕ  ಹುಳುಗಳು  ಹತ್ತಿ ಸಸ್ಯದ ಕೊಂಬೆಗಳನ್ನು ಸಸ್ಯದ ಬೆಳೆವಣಿಗೆ  ಹಂತದಲ್ಲಿ ಹಾನಿಗೊಳಿಸುತ್ತವೆ, ಇದರಿಂದಾಗಿ ಸಸ್ಯದ  ಚಿಗುರು ಒಣಗುತ್ತದೆ ಮತ್ತು ಸಾಯುತ್ತದೆ.

  Spotted bollworm

ಈ ಕಾಯಿಕೊರಕ ಹುಳಗಳು ಕಾಯಿಗಳ  ಮೇಲೆ ದಾಳಿ ಮಾಡುವುದರಿಂದ ಕಾಯಿಗಳ ಮೇಲೆ ರಂದ್ರಗಳು ಉಂಟಾಗಿ  ಅನಂತರ  ಕೊಳೆತು ಹೋಗುತ್ತವೆ.

ಅಮೆರಿಕನ್ ಕಾಯಿಕೊರಕ  ಹೊರತುಪಡಿಸಿ ಬೇರೆ ಯಲ್ಲಾ ಕಾಯಿಕೊರಕಗಳನ್ನು ಈ ಕೆಳಗಿನ ರಾಸಾಯನಿಕಗಳನ್ನು ಸರಿಯಾದ ಬಳಕೆಯ ವಿಧಾನಗಳೊಂದಿಗೆ ಬಳಸುವುದರ ಮೂಲಕ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ಕ್ರ .

ತಾಂತ್ರಿಕ ಅಂಶದ ಹೆಸರು

ವ್ಯಾವಹಾರಿಕ ಹೆಸರು( ಟ್ರೇಡ್ ನೇಮ್) 

1

ಎಮಾಮೆಕ್ಟಿನ್ ಬೆಂಜೊಯೇಟ್

ಫೊಕ್ಲೇಮ್ , ಸ್ಟಾರ್ ಕ್ಲೇಮ್ , ಇಎಂ -1, ರಿಲಾನ್, ಎಮಾ ಗೋಲ್ಡ್, ಬಯೋಕ್ಲೇಮ್., ಇತ್ಯಾದಿ

2

ಸ್ಪಿನೋಸಾಡ್

ಟ್ರೇಸರ್, ಸ್ಪಿಂಟರ್

3

ಪ್ರೊಫೆನೊಪಾಸ್ + ಸೈಪರ್‌ಮೆಥ್ರಿನ್

ರಾಕೆಟ್, ಪ್ರೊಫೆಕ್ಸ್ ಸೂಪರ್, ಪಾಲಿತ್ರಿನ್

4

ಕ್ಲೋರೋಪೈರಿಫಾಸ್ + ಸೈಪರ್ ಮೆಥ್ರಿನ್

ಹಮ್ಲಾ, ಕೊರಂಡಾ, ಡರ್ಮೆಟ್, ಪ್ರಿಡೇಟರ್ .

5

ನೊವಾಲುರಾನ್+ಇಂಡೊಕ್ಸಾಕಾರ್ಬ್

ಪ್ಲಿಥೊರಾ, ರಿಮ್ ಆನ್ ..

6

ಕ್ಲೋರಾಂಟ್ರಾನಿಲಿಪ್ರೊಲ್

ಕೊರಾಜೆನ್,ಆಂಪ್ಲಿಗೊ .

7

ಫ್ಲುಬೆಂಡಿಯಮೈಡ್

ಫೇಮ್ , ಫ್ಲುಟನ್, ಬೆಲ್ಟ್ ಎಕ್ಸ್ಪರ್ಟ್ , ಟಕುಮಿ,

8

ಬ್ಯಾಸಿಲಸ್ ಥುರೆಂಜಿಯೆನ್ಸಿಸ್ (ಸಾವಯವ)

ಡೆಲ್ಫಿನ್

 

    Management of boll worms complex on Cotton

 

  1. ಜಿಗಿ ಹುಳು (ಅಮ್ರಾಸ್ಕಾ ಬಿಗುಟುಲಾ) Plant hoppers or Jassids

ಜಿಗಿ ಹುಳಗಳು  ಹತ್ತಿ ಬೆಳೆಯಲ್ಲಿ  ರಸ ಹೀರುವುದರಿಂದ , ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ  , ಎಲೆಗಳು ಕೆಳಕ್ಕೆ  ಮುದುಡುವುದು ಮತ್ತು ಸಸ್ಯಗಳ ಬೆಳವಣಿಗೆ ಕಡಿಮೆಯಾಗುತ್ತದೆ.

      Jassid attack on cotton crop

ತೀವ್ರವಾದ ಹಾವಳಿಯಾದ  ಸಂದರ್ಭದಲ್ಲಿ ಎಲೆಗಳ ಅಂಚು ಇಟ್ಟಿಗೆ ಬಣ್ಣಕ್ಕೆ ತಿರುಗಿ ಒಣಗುತ್ತವೆ. 

  1. ಹತ್ತಿ ಎಫಿಡ್ಸ್ ಸಸ್ಯಹೇನು(ಆಫಿಸ್ ಗಾಸಿಪಿ) Aphids

ಎಫಿಡ್ಸ್ ಸಸ್ಯಹೇನುಗಳು ಹತ್ತಿ ಬೆಳೆಯನ್ನು ದಾಳಿ  ಮಾಡಬಲ್ಲವು, ಅವು ಹತ್ತಿ ಸಸಿಗಳ ಚಿಗುರು ಎಲೆಗಳ ರಸವನ್ನು ಹೀರಿದಾಗ, ಎಲೆಗಳು ಕೆಳಕ್ಕೆ  ಮುದುಡುವುದು ಮತ್ತು ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ಎಫಿಡ್ಸ್ ಸಸ್ಯಹೇನುಗಳು ಎಲೆಗಳ ಮೇಲೆ ಅಂಟು ದ್ರಾವಣ ಸ್ರವಿಸುತ್ತವೆ.

   Aphids on Cotton

ಈ ಅಂತೂ ಸಿಹಿಯಾಗಿರುತ್ತದೆ, ಆ ಸಿಹಿಯನ್ನು ತಿನ್ನಲು ಶಿಲೀಂಧ್ರ ಹಾವಳಿ ಯಾಗಿ ಎಲೆಗಳ ಮೇಲೆ ಕಪ್ಪು ಬೂಷ್ಟು ಬೆಳೆಯುತ್ತದೆ.

  1. ಹತ್ತಿಯ ಥ್ರಿಪ್ಸ್ ನುಸಿ ( ಥ್ರಿಪ್ಸ್ ಟಬಾಸಿ ). Thrips

ಥ್ರಿಪ್ಸ್ ನುಸಿ ಕೀಟಗಳು ಮತ್ತೊಂದು ರಸ ಹೀರುವ ಕೀಟಜಾತಿಯಾಗಿದ್ದು, ಇದು ಹತ್ತಿಯ  ಎಲೆಗಳ ರಸವನ್ನು ಹೀರಿಕೊಳ್ಳುತ್ತದೆ, ಎಲೆಗಳು ಹಳದಿ ಬಣ್ಣವನ್ನು ತಿಳಿ ಹಸಿರು ಬಣ್ಣಕ್ಕೆ ತಿರುಗಿಸುತ್ತವೆ.

   Trhips attack on cotton plants

ಕಿರಿಯ ಎಲೆಗಳು ಕಡಿಮೆ ಗಾತ್ರದೊಂದಿಗೆ ಮೇಲಕ್ಕೆ ತಿರುಗುತ್ತವೆ ಮತ್ತು ತೀವ್ರವಾದ ಹಾವಳಿಯಿಂದ  ಎಲೆಯ ಅಂಚುಗಳು ಕಂದು ಬಣ್ಣ ತಿರುಗಿ  ಸುಡುವಂತೆ ಆಗುತ್ತದೆ.  

  1. ಕೆಂಪು ಹತ್ತಿ ತಿಗಣೆ:(ಡಿಸ್ಡರ್ಕಸ್ ಸಿಂಗ್ಯುಲಾಟುಸಿ) Red cotton bug

ಕೆಂಪು ಹತ್ತಿ ತಿಗಣೆಯ ವಯಸ್ಕ ದುಂಬಿ ಮತ್ತು ವಯಸ್ಕ ಪೂರ್ವ ಹಂತದ ದುಂಬಿಗಳು ಕಾಯಿಗಳನ್ನು ಕೊರೆದು,  ಬೆಳೆಯುತ್ತಿರುವ ಬೀಜಗಳನ್ನು ತಿನ್ನುತ್ತವೆ. ಇದರಿಂದ ಕಾಯಿಗಳು ಬಲಿಯದೆ ಹತ್ತಿಯ ನೂಲಿನ ಗುಣ ಮಟ್ಟವೂ ಕುಗ್ಗುತ್ತದೆ.

    Red cotton bugs on cotton

ಕೆಂಪು ಹತ್ತಿ ತಿಗಣೆಯಿಂದ  ನೂಲಿನಲ್ಲಿ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾ ಸಹ ಹರಡಬಹುದು. ಹತ್ತಿ ಕಾಯಿಯ ನೂಲು ಕೆಂಪು ಬಣ್ಣಕ್ಕೆ ತಿರುಗುತ್ತವೆ ಹಾಗೂ  ಕಾಯಿಗಳು  ಕಪ್ಪು ಬಣ್ಣಕ್ಕೆ ತಿರುಗಬಹುದು.

ಮೇಲೆ ವಿಚಾರ ಮಾಡಿದ ರಸ ಹೀರುವ ಕೀಟಗಳು ಹತ್ತಿ ಬೆಳೆಯಲ್ಲಿ ಸರ್ವೇ ಸಾಮಾನ್ಯವಾಗಿ ಹಾವಳಿ ಮಾಡಿ ಬೆಳೆಗೆ ಹೆಚ್ಚು ನಷ್ಟ ಮಾಡಬಲ್ಲವು. ಕೆಳಗೆ ಪಟ್ಟಿ ಮಾಡಿರುವ ಕೀಟ ನಾಶಕಗಳ ಸಮರ್ಪಕ ಬಳಕೆ ಯಿಂದ ರಸ ಹೀರುವ ಕೀಟಗಳಿಂದ ಹತ್ತಿ ಬೆಳೆಯನ್ನು ರಕ್ಷಿಸಬಹುದು.

 

ಕ್ರ .

 ತಾಂತ್ರಿಕ ಅಂಶದ ಹೆಸರು

ವ್ಯಾವಹಾರಿಕ ಹೆಸರು( ಟ್ರೇಡ್ ನೇಮ್) 

1

ಅಸಿಫೇಟ್

ಹಂಕ್, ಅಸಟಾಫ್, ಲ್ಯಾನ್ಸರ್ ಗೋಲ್ಡ್ ,

2

ಇಮಿಡಾಕ್ಲೋಪ್ರಿಡ್

 ಕಾನ್ಫಿಡರ್, ಇಮಿಡಾಸ್ಟಾರ್, ಪ್ಯೂರ್ ಇಮಿಡಾ

3

ಬೇವಿನ ಎಣ್ಣೆ  50000 ಪಿ ಪಿ ಎಂ

ಏಕೋಟಿನ್

4

ಫಿಪ್ರೊನಿಲ್

ರೀಜೆಂಟ್, ಶಿಂಜಿನ್ ಪ್ಲಸ್

4

ಸ್ಪೈನೋಸಾಡ್

ಟ್ರೇಸರ್, ಸ್ಪಿಂಟರ್

5

ಥಯೋಮೆಥಾಕ್ಸಮ್

ಆಕ್ಟಾರಾ, ಕೇಪರ್, ಮ್ಯಾಕ್ಸಿಮಾ

6

ಟೋಲ್ಫೆನ್ಪಿರಾಡ್

ಕೀಫನ್

 

 

  Management of sucking pests on Cotton 

  1. ಬಿಳಿನೊಣ (ಬೆಮಿಸಿಯಾ ಟಬಾಸಿ) Whiteflies

ಹತ್ತಿ ಬೆಳೆಯು ಬಿಳಿನೊಣದ  ಹಾವಳಿಗೂ ಒಳಗಾಗುತ್ತದೆ ಮತ್ತು ಬಿಳಿನೊಣಗಳು  ಎಳೆಯ ಸಸ್ಯಗಳ ಮೇಲೆ ದಾಳಿ ಮಾಡುತ್ತವೆ, ರಸವನ್ನು ಹೀರುತ್ತವೆ ಮತ್ತು ಎಫಿಡ್ಸ್ ಸಸ್ಯಹೇನುಗಳು ಸಿಹಿ ಅಂಟನ್ನು ಸ್ರವಿಸುವ ಹಾಗೆಯೇ  ಬಿಳಿನೊಣಗಳು ನೊಣಗಳೂ  ಅಂಟನ್ನು ಹೊರಹಾಕುತ್ತವೆ ಮತ್ತು ಅದನ್ನು ಸವಿಯಲು ಶಿಲೀಂದ್ರಗಳ ಆಕ್ರಮಣ ವಾಗಿ ಕಪ್ಪು ಬೂಸ್ಟು (ಸೂಟಿ ಮೊಲ್ಡ್) ಅಭಿವೃದ್ಧಿಯಾಗುವುದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುತ್ತದೆ.

   Whiteflies on Cotton crop

ಇದರಿಂದ ಹತ್ತಿ ಗಿಡಗಳ ಬೆಳೆವಣಿಗೆ ಕುಂಠಿತ ಕಾಣಬಹುದು. ಬಿಳಿನೊಣಗಳು ಹತ್ತಿ ಬೆಳೆಯಲ್ಲಿ ವೈರಸ್ ನಂಜು ರೋಗವನ್ನು ಹರಡಲು ಕಾರಣವಾಗಬಹುದು. 

ಬಿಳಿ ನೊಣಗಳ ನಿರ್ವಹಣೆ 

ಕ್ರ .

 ತಾಂತ್ರಿಕ ಅಂಶದ ಹೆಸರು

ವ್ಯಾವಹಾರಿಕ ಹೆಸರು( ಟ್ರೇಡ್ ನೇಮ್) 

1

ಅಸೆಟಾಮಿಪ್ರೈಡ್ 20% ಎಸ್ಪಿ

ಎಕ್ಕಾ, ಪ್ರೈಮ್, ಪ್ರೈಮ್ ಗೋಲ್ಡ್

2

ಸ್ಪಿರೊಟೆಟ್ರಮಾಟ್ +ಇಮಿಡಾಕ್ಲೋಪ್ರಿಡ್

ಮೂವೆಂಟೊ ಎನರ್ಜಿ

3

ಬೇವಿನ ಎಣ್ಣೆ (5%) 50000 ಪಿ ಪಿ ಎಂ

ಇಕೋಟಿನ್

4

ಅಸಿಫೆಟ್ + ಬುಪರ್‌ಫೆಜಿನ್

ಓಡಿಸ್

5

ಇನ್ಸ್ಕಾಲಿಸ್

ಸೆಫಿನಾ

6

ಡಯಾಫೆಂತುರಾನ್

ಬಿಲಿಯನ್, ಪೆಗಾಸಸ್ , ಪೇಜರ್, ಪಿಡೂನ್

7

ಪೈಮೆಟ್ರೋಜೈನ್ 50%

ಚೆಸ್, ಅಪ್ಲೈ

 

 

    Management of whiteflies on Cotton 

  1. ಹಿಟ್ಟು ತಿಗಣೆ : (ಫೆನಾಕೊಕಸ್ ಎಸ್ಪಿ, ಫೆರ್ರಿಸಾ ಎಸ್ಪಿ ಮತ್ತು ಮ್ಯಾಕೊನೆಲಿಕೊಕಸ್ ಎಸ್ಪಿ) Mealy bugs

ಹತ್ತಿ ಬೆಳೆಯಲ್ಲಿ ಹಿಟ್ಟು ತಿಗಣೆಗಳು ಸಾಮಾನ್ಯ ರಸ ಹೀರುವ ಕೀಟಗಳಾಗಿವೆ. ಹಿಟ್ಟು ತಿಗಣೆಗಳು ಎಲೆಗಳ ಕೆಳಗಡೆ ಗುಂಪಿನಲ್ಲಿದ್ದು ಅಂಟು ಸಿಹಿ ದ್ರವವನ್ನು ಸ್ರವಿಸುತ್ತದೆ . ಹಿಟ್ಟು ತಿಗಣೆ ರಸ ಹೀರುವ  ಸಸ್ಯಗಳಲ್ಲಿ  ಕಪ್ಪು ಬೂಷ್ಟ್  ಸಹ ಕಂಡುಬರುತ್ತದೆ.

     Mealy bugs in cotton crop

ಸಸ್ಯಗಳು ದುರ್ಬಲವಾಗುತ್ತವೆ ಮತ್ತು ನಿರ್ವಹಿಸದಿದ್ದರೆ ಇಳುವರಿ ಕಡಿಮೆಯಾಗುತ್ತದೆ.

ಹತ್ತಿಯಲ್ಲಿ ಹಿಟ್ಟು ತಿಗಣೆಗಳ  ನಿರ್ವಹಣೆ: 

ಕ್ರ .

ತಾಂತ್ರಿಕ ಅಂಶದ ಹೆಸರು

ವ್ಯಾವಹಾರಿಕ ಹೆಸರು( ಟ್ರೇಡ್ ನೇಮ್)

1

ಡಿಮೆಥೊಯೇಟ್

ಟಾಫ್ಗೋರ್

2

ಸ್ಪಿರೊಟೆಟ್ರಮಾಟ್ +ಇಮಿಡಾಕ್ಲೋಪ್ರಿಡ್

ಮೂವೆಂಟೊ ಎನರ್ಜಿ

3

ಪೈಮೆಟ್ರೋಜೈನ್ 50%

ಚೆಸ್, ಅಪ್ಲೈ

4

ಥಯೋಮೆಥಾಕ್ಸಮ್

ಆಕ್ಟಾರಾ, ಕೇಪರ್, ಮ್ಯಾಕ್ಸಿಮಾ

5

ಪ್ರೊಫೆನೊಪಾಸ್ + ಸೈಪರ್‌ಮೆಥ್ರಿನ್

ರಾಕೆಟ್, ಪಾಲಿಟ್ರಿನ್

 

  Management of mealy bugs on Cotton

ಹತ್ತಿ ಅಥವಾ ಯಾವುದೇ ಬೆಳೆಗಳಲ್ಲಿ ಕಳೆಗಳು ಯಾವಾಗಲೂ ಹಾನಿಕಾರಕ ಕೀಟಗಳಿಗೆ ಪರ್ಯಾಯ ಆತಿಥೇಯ ಗಿಡಗಳಾಗಿ ಪರಿಣಮಿಸಿ, ಮುಖ್ಯ ಬೆಳೆಗಳಿಗೆ ಹಾನಿ ಮಾಡಬಲ್ಲವು. ಹೊಲಗಳಲ್ಲಿ ಸರಿಯಾದ ನೈರ್ಮಲ್ಯ, ಕಳೆ ಮುಕ್ತವಾಗಿ ನಿರ್ವಹಣೆ ಮಾಡಿದಾಗ ಹಾನಿಕಾರಕ ಕೀಟಗಳ ಹಾವಳಿ ತೀರಾ ಕಡಿಮೆ ಇರುತ್ತದೆ.

 11. ಹತ್ತಿಯ ಮೇಲೆ ನುಸಿ ಗಳ ಹಾವಳಿ Mites

ಕೆಂಪು ಜೇಡ ನುಸಿ (ರೆಡ್ ಸ್ಪೈಡರ್ ಮೈಟ್ಸ್): [ಟೆಟ್ರಾನೈಚಡ್ ಸಿನ್ನಾಬರಿನಸ್], ಹಳದಿ ನುಸಿ / ಬ್ರಾಡ್ ನುಸಿ: ಪಾಲಿಫಾಗೋಟಾರ್ಸೋನೆಮಸ್ ಲ್ಯಾಟಸ್ ಮತ್ತು ವಾಲಿ ನುಸಿ: [ಅಸೆರಿಯಾ ಗಾಸಿಪಿ] ಮೂರು ವಿಧದ ನುಸಿ ಕ್ರಿಮಿಗಳು ಸಾಮಾನ್ಯವಾಗಿ ಹತ್ತಿ ಬೆಳೆಗೆ ಮುತ್ತಿಕೊಳ್ಳುತ್ತವೆ.

   Mites attack in Cotton crop

ಹತ್ತಿ ಬೆಳೆಯ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ನುಸಿ ಕ್ರಿಮಿಗಳು  ಸಸ್ಯಗಳ ಮೇಲೆ ದಾಳಿ ಮಾಡುತ್ತವೆ, ಸಾಮಾನ್ಯವಾಗಿ ಕೆಂಪು ಜೇಡ ನುಸಿ ಎಲೆಗಳ ಮೇಲ ಮತ್ತು   ಹಳದಿ ನುಸಿ / ಬ್ರಾಡ್ ನುಸಿಗಳು ಎಳೆಗಳ ಕೆಳಭಾಗದಲ್ಲಿ ಕಂಡುಬರುತ್ತವೆ. ನುಸಿ ಕ್ರಿಮಿಗಳು ರಸ ಹೀರುವುದರಿಂದ ಸಸ್ಯಗಳ ಬೆಳೆವಣಿಗೆ ಕುಂಠಿತವಾಗಿ ಹೂವು ಮತ್ತು ಕಾಯಿ ಕಟ್ಟವುದೂ ಕ್ಷೀಣಿಸುತ್ತದೆ.

   ಹತ್ತಿಯಲ್ಲಿ ನುಸಿಗಳ ನಿರ್ವಹಣೆ

ಕ್ರ .

ತಾಂತ್ರಿಕ ಅಂಶದ ಹೆಸರು

ವ್ಯಾವಹಾರಿಕ ಹೆಸರು( ಟ್ರೇಡ್ ನೇಮ್)

1

ಅಬಾಮೆಕ್ಟಿನ್

ಅಬಾಸಿನ್

2

ಸ್ಪಿರೋಮೆಸಿಫೆನ್

ಒಬೆರಾನ್

3

ಪ್ಲಾಂಟ್ ಎಸ್ಟ್ರಾಕ್ಟ್

ರಾಯಲ್ ಕ್ಲಿಯರ್  ಮೈಟ್

4

ಪ್ರೊಪಾರ್ಗೈಟ್

ಓಮೈಟ್

5

ಫೆನಾಜಾಕ್ವಿನ್

ಮ್ಯಾಜಿಸ್ಟರ್

6

ಫೆನ್ಪಿರೋಕ್ಸಿಮೇಟ್

ಪೈರೋಮೈಟ್

 

                         ***********

ಲೇಖಕರು: ವನಿತ ಕೆ
ವಿಷಯ ತಜ್ಞರು , ಬಿಗ್ ಹಾಟ್.

ಸಲಹೆ: ಕೆ ಸಂಜೀವ ರೆಡ್ಡಿ,
ಬಿಗ್ ಹಾಟ್

_________________________________________________

ಹೆಚ್ಚಿನ ಮಾಹಿತಿಗೆ ಕಛೇರಿ ಸಮಯದಲ್ಲಿ 8050797979 ಗೆ ಕರೆ ಮಾಡಿ  ಅಥವಾ 180030002434 ಗೆ ಮಿಸ್ಡ್ ಕಾಲ್ ನೀಡಿ.    8050797979 ಗೆ  ವಾಟ್ಸಾಪ್ ಕೂಡ ಮಾಡಬಹುದು.

-----------------------------------------------------------------------------------

Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.


Leave a comment

यह साइट reCAPTCHA और Google गोपनीयता नीति और सेवा की शर्तें द्वारा सुरक्षित है.


Explore more

Share this