News — Kannada
ವಿಜ್ಞಾನ ಮತ್ತು ಪರಿಸರ: ಪರಿಸರ ವಾದಿಗಳಿಗೆ ಹೊಸದಾರಿ ದೀಪ
Posted by Raj Kancham on
ಪ್ರಪಂಚದಾದ್ಯಂತ ಪರಿಸರವಾದಿಗಳು ಮಾಂಸಾಹಾರದ ವಿರುದ್ಧವಿದ್ದಾರೆ. ಈ ಅಧುನಿಕ ಜಗತ್ತಿನಲ್ಲಿ ಮಾಂಸ ಉತ್ಪಾದನೆ ಎಂಬುದು ಒಂದು ಬೃಹತ್ ಉದ್ಯಮವಾಗಿ ಬೆಳೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಂದು ಕೆ.ಜಿ. ಮಾಂಸ ಉತ್ಪತ್ತಿ ಮಾಡಲು ಸರಿಸುಮಾರು ಹತ್ತು ಕೆ.ಜಿ. ದವಸಧಾನ್ಯ ಪ್ರಾಣಿ ಪಕ್ಷಿಗಳಿಗೆ ತಿನ್ನಿಸಬೇಕಾಗುತ್ತದೆ. ಅದೇ ರೀತಿ ಒಂದು ಕೆ.ಜಿ. ಮಾಂಸ ಉತ್ಪಾದನೆಗೆ ಸುಮಾರು 20,940 ಲೀಟರ್ ಬಳಕೆಯಾದರೆ ಒಂದು ಕೆಜಿ ಗೋಧಿ ಬೆಳೆಯಲು 503 ಲೀಟರ್ ನೀರು ಸಾಕು. ನೀರಿನ ಬಳಕೆ ಒಂದು ಕಡೆಯಾದರೆ, ಮಾಂಸಕ್ಕಾಗಿಯೇ ಸಾಕಲ್ಪಡುವ ಪ್ರಾಣಿಗಳಿಂದ ಉತ್ಪತ್ತಿಯಾಗುವ ವಿಸರ್ಜನೆ ಶೇಖಡ 130 ಪಟ್ಟು ಹೆಚ್ಚು. ಇದರಿಂದ ಪರಿಸರ ಕಲುಷಿತವಾಗುತ್ತಿರುವುದು ಮತ್ತು ಬ್ಯಾಕ್ಟೀರಿಯಾಗಳು ಹರಡುತ್ತಿರುವುದು ಸತ್ಯ. ಮಾಂಸಕ್ಕಾಗಿಯೇ ಬೆಳಸುವ ಪ್ರಾಣಿಗಳನ್ನ ಅನೇಕ ರಾಸಾಯನಿಕ ಮತ್ತು ವೈದ್ಯಕೀಯ ಔಷಧಿ, ಇಂಜೆಕ್ಷನ್ ಬಗ್ಗೆ ಹೇಳುವುದೇ ಬೇಡ. ಅದಕ್ಕಿಂತ ಮುಖ್ಯವಾಗಿ ಪ್ರಾಣಿಗಳಿಗೆ ಕೊಡುವ ಹಿಂಸೆ. ಅನೇಕ ಸಾರಿ ಈ ಪ್ರಾಣಿಗಳು ಸಹಜವಾಗಿ ಬದುಕುವುದೇ ಇಲ್ಲ. ಬಹುತೇಕ ಜೀವನ ಒಂದು ಪುಟ್ಟ ಪೆಟ್ಟಿಗೆಯಲ್ಲಿ ಕಳೆದು ಬಿಡುತ್ತವೆ.ಅಧುನಿಕ ತಂತ್ರಜ್ಞಾನದಿಂದ ಹೆಚ್ಚು...