ರೈತನಿಗೆ ಗುಣಮಟ್ಟದ ಬೀಜ ಒದಗಿಸುವ 'ಬಿಗ್ ಹ್ಯಾಟ್'

ರೈತ ಇಂದು ಸಂಕಷ್ಟದಲ್ಲಿದ್ದಾನೆ. ಬೆಳೆದ ಫಸಲಿಗೆ ತಕ್ಕ ಲಾಭ ಸಿಗುತ್ತಿಲ್ಲ, ಮಾಡಿದ ಸಾಲ ತಿರುಗಿಸಲು ಸಾಧ್ಯವಾಗುತ್ತಿಲ್ಲ, ಸಂಸಾರವನ್ನು ಸಾಗಿಸಲು ಸಾಧ್ಯವಾಗದೆ ಅನಿವಾರ್ಯವಾಗಿ ನೇಣಿಗೆ ಶರಣಾಗುತ್ತಿದ್ದಾನೆ, ವಿಷದ ಬಟ್ಟಲು ಗಂಟಲಿಗಿಳಿಸುತ್ತಿದ್ದಾನೆ. ಇಂದು ಕೃಷಿಯನ್ನೇ ನಂಬಿರುವ ರೈತ ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಆದರೆ, ರೈತರಿಗೆ ಸಕಾಲದಲ್ಲಿ ಗುಣಮಟ್ಟದ ಬೀಜ, ತಕ್ಕ ಬೆಲೆಗೆ ಸಿಕ್ಕರೆ, ಒಂದಾದರೂ ಸಮಸ್ಯೆಗೆ ಪರಿಹಾರ ಸಿಕ್ಕೀತೆಂದು, ರೈತರ ಪರ ಕಾಳಜಿ ಇರುವ ಒಂದು ಯುವ ಸಾಫ್ಟ್ ವೇರ್ ಇಂಜಿನಿಯರುಗಳು ಹೊಸ ಕ್ರಾಂತಿಗೆ ಮುಂದಾಗಿದ್ದಾರೆ. ಈ-ಕಾಮರ್ಸ್ ಮೂಲಕ ರೈತರನ್ನು ತಲುಪುವ ಉದ್ದೇಶದಿಂದ bighaat.com ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ದೇಶದ ಬೆನ್ನೆಲುಬಾದ ರೈತನಿಗೆ ಇಂದು ಗುಣಮಟ್ಟದ ಬೀಜಗಳು ಸೂಕ್ತ ಬೆಲೆಗೆ ಸಿಗುತ್ತಿಲ್ಲ. ಹಲವಾರು ಕಂಪನಿಗಳು ಒದಗಿಸುವ ಕಳಪೆ ಗುಣಮಟ್ಟದ ಬೀಜಗಳಿಂದಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾನೆ. ಜೊತೆಗೆ ಮಧ್ಯವರ್ತಿಗಳ ಹಾವಳಿ ಕೂಡ ನೇಗಿಲಯೋಗಿಯನ್ನು ಕಂಗೆಡುವಂತೆ ಮಾಡಿದೆ. ಉತ್ತಮ ಬೀಜಗಳಿಗಾಗಿ ನಗರಗಳಿಗೆ ಅಲೆದಾಡುವುದು ತಪ್ಪುತ್ತಿಲ್ಲ.

Read more at: http://kannada.oneindia.com/news/karnataka/e-commerce-website-bighaat-supply-quality-seeds-to-farmers-in-time-095004.html

Leave a comment

This site is protected by reCAPTCHA and the Google Privacy Policy and Terms of Service apply.