ಪಪ್ಪಾಯ (ಪರಂಗಿ) ಹಣ್ಣಿನ ಬೆಳೆಯಲ್ಲಿ ಹೂವು ಉದುರುವಿಕೆಯ ಸಮಗ್ರ ನಿರ್ವಹಣೆ

ಪಪ್ಪಾಯ ಅಥವಾ ಪರಂಗಿ ಹಣ್ಣು, ಭಾರತದಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯಿಕ ಹಣ್ಣುಗಳಲ್ಲಿ ಒಂದಾಗಿದ್ದು, ಅದರಲ್ಲಿರುವ ಪೌಷ್ಟಿಕಾಂಶಗಳು ಹಾಗೂ ಔಷಧಿಯ ಗುಣಗಳಿಂದ ಹೆಚ್ಚು ಬೇಡಿಕೆಯಲ್ಲಿದೆ. ಇತರೆ ಹಣ್ಣಿನ ಬೆಳೆಗಳಿಗೆ ಹೋಲಿಸಿದಾಗ, ಹೆಚ್ಚಿನ ಉತ್ಪಾದಕತೆಯೊಂದಿಗೆ ಅತಿ ಕಡಿಮೆ ಸಮಯದಲ್ಲಿ (ಅಂದರೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ) ಇಳುವರಿಯನ್ನು ನೀಡುವ ಹಣ್ಣಿನ ಬೆಳೆ ಇದಾಗಿದೆ. ಅದಾಗ್ಯೂ, ಈ ಹಣ್ಣಿನ ಬೆಳೆಯು ಹೂವು ಉದುರುವಿಕೆಯ ನ್ಯೂನತೆಯಿಂದ ಹೆಚ್ಚು ಬಳಲುತ್ತಿದ್ದು, ಇದರಿಂದ ಹಣ್ಣು ಕಟ್ಟುವಿಕೆ ಕುಗ್ಗುವುದಲ್ಲದೆ ಅದರಿಂದ ನೇರವಾಗಿ ಇಳುವರಿ ಕುಂಠಿತವಾಗುತ್ತದೆ.

 

ಪಪ್ಪಾಯ ಹಣ್ಣಿನ ಬೆಳೆಯಲ್ಲಿ ಹೂವು ಉದುರುವಿಕೆಗೆ ಹಲವಾರು ಕಾರಣಗಳಿದ್ದು, ಅವುಗಳು ಈ ಕೆಳಗಿನಂತಿವೆ

 

 1. ತಾಪಮಾನ ಹಾಗೂ ಸಾಪೇಕ್ಷ ಆದ್ರ್ರತೆ: ವಾತಾವರಣದಲ್ಲಿ ವಿಶೇಷವಾಗಿ ಗಿಡದ ಹಾಗೂ ಹೂವಿನ ಸುತ್ತಮುತ್ತಲಿನ ತಾಪಮಾನವು ಶೇ. 20- 30 ಡಿಗ್ರಿ ಹಾಗೂ ಸಾಪೇಕ್ಷ ಆದ್ರ್ರತೆ 70-85 % ಇರಬೇಕು. ಇದಕ್ಕಿಂತ ಹೆಚ್ಚಿ ಅಥವಾ ಕಡಿಮೆ ಇದ್ದಾಗ, ಇದು ಹೂವುಗಳ ಪರಾಗಸ್ಪರ್ಶದ (ಪೊಲಿನೇಶನ್) ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಹಣ್ಣು ಕಟ್ಟದೆ ಹೂವುಗಳು ಉದಿರಿಹೊಗುತ್ತವೆ.

ವಾತಾವರಣದ ವೈಪರಿತ್ಯದಿಂದ ಆಗುವ ಹೂವು ಉದುರುವಿಕೆಯನ್ನು ಬೆಳೆ ನಿಯಂತ್ರಕಗಳ ಸಿಂಪರಣೆಯಿಂದ ತಕ್ಕ ಮಟ್ಟಿಗೆ ನಿವಾರಿಸಬಹುದು, ಆದರೆ ಹಣ್ಣುಗಳ ಗುಣಮಟ್ಟದಲ್ಲಿ ಕೊಂಚ ಇಳುಮುಖವಾಗಬಹುದು.  

 

 1. ಬೇಸಾಯ ಪದ್ಧತಿಯಲ್ಲಿ ಸಾರಜನಕದ ಕೊರತೆ ಅಥವಾ ಹೆಚ್ಚಿದ್ದಾಗ:

ಬೆಳೆಗೆ ಸಾರಜನಕದ ಲಭ್ಯತೆ ಅತಿ ಹೆಚ್ಚು ಇದ್ದಾಗ ಹಾಗೂ ಕೊರತೆ ಇದ್ದಾಗ, ಎರಡೂ ಸಂದರ್ಭಗಳಲ್ಲಿಯೂ ಕೂಡ ಹೂವು ಉದುರುವಿಕೆಗೆ ಕಾರಣವಾಗಬಹುದು. ಸಾರಜನಕ ಹೆಚ್ಚಿದ್ದಾಗ ಅದು ನೇರವಾಗಿ ಹೂವುಗಳ ಗರ್ಭಪಾತಕ್ಕೆ ಕಾರಣವಾಗಬಹುದು, ಇದರಿಂದ ಹೂ ಬಿಡುವಿಕೆ ಹಾಗೂ ಹಣ್ಣು ಕಟ್ಟುವುಕೆ ಮೇಲೆ ಪರಿಣಾಮ ಬೀರುತ್ತದೆ.

ಅಮೊನಿಯಾಕಲ್ ರೂಪದಲ್ಲಿರು ಸಾರಜನಕ ಹೆಚ್ಚಾದ್ದಾಗ, ನಂಜುರೋಗದ ಸೋಂಕು ಹೆಚ್ಚುತ್ತದೆ, ಇದರಿಂದಲೂ ಕೂಡ ಹೂವು ಉದುರುವಿಕೆ ಹೆಚ್ಚುತ್ತದೆ. ಇದಕ್ಕಾಗಿ ನೀವು ನಂಜುರೋಗದ ನಿರ್ವಹಣೆ ಮಾಡಬೇಕು, ಜೊತೆಗೆ ಮ್ಯಾಂಗನೀಸ್ ಲಘು ಪೋಶಕಾಂಶವನ್ನ ನೀಡುವುದರಿಂದ ಯತ್ಥೇಚ್ಚವಾಗಿ ಸಾರಜನಕದ ಬಳಕೆಯಿಂದ ಉಂಟಾದ ನಂಜುರೋಗವನ್ನ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದು.

 

 1. ಮಣ್ಣಿನ ತೇವಾಂಶ ಅತೀ ಹೆಚ್ಚು ಅಥವಾ ಕಡಿಮೆ ಇದ್ದಾಗಲೂ ಕೂಡ ಅದು ಹೂವು ಕಟ್ಟುವಿಕೆ, ಪರಾಗಸ್ಪರ್ಶ ಹಾಗೂ ಕಾಯಿ ಕಟ್ಟುವಿಕೆ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಲೂ ಕೂಡ ಹೂವುಗಳು ಉದುರುತ್ತವೆ. ಅಸಮಾನ ಪ್ರಮಾಣದ ನೀರನ್ನು ನೀಡುವುದರಿಂದ ಗಿಡಗಳಲ್ಲಿ ಒತ್ತಡ ಹೆಚ್ಚಾಗಿ, ಅದು ಅಸಮಾನವಾದ ಹೂವು ಬಿಡುವಿಕೆ ಹಾಗೂ ಕಾಯಿ ಕಟ್ಟುವಿಕೆಗೆ ಕಾರಣವಾಗುತ್ತದೆ.

 

 1. ಬೆಳಕಿನ ತೀರ್ವತೆ ಅತೀ ಹೆಚ್ಚು ಅಥವಾ ಕಡಿಮೆ ಇದ್ದಾಗಲೂ ಕೂಡ, ಅದರಿಂದ ಹೂವು ಬಿಡುವಿಕೆಗೆ ಅನಾನುಕೂಲಕರ ವಾತಾವರಣ ಸೃಷ್ಟಿಯಾಗಿ ಅದು ಹೂವು ಉದುರುವಿಕೆಗೆ ಕಾರಣವಾಗಬಹುದು.

 

 1. ಅತಿಯಾದ ಗಾಳಿ ಇದ್ದಾಗ ಸರ್ವೇ ಸಾಮಾನ್ಯವಾಗಿ ಅದು ಹೂವುಗಳ ಮೇಲೆ ಹಾನಿಯನ್ನ ಉಂಟುಮಾಡುತ್ತವೆ, ಇದರಿಂದ ಪರಾಗವು ಚದುರಿಹೋಗಿ, ಪರಾಗಸ್ಪರ್ಶ ಹಾಗೂ ಕಾಯಿ ಕಟ್ಟುವಿಕೆ ಮೇಲೆ ಪರಿಣಾಮ ಬೀರುತ್ತದೆ.

 

 

 1. ರಸ ಹೀರುವ ಹಾಗೂ ಹೂವು, ಎಲೆಗಳನ್ನು ಅಗೆದು ತಿನ್ನುವ ಕೀಟದ ಹಾನಿಯಿಂದಲೂ ಹೂವು ಹಾಗೂ ಕಾಯಿ ಕಟ್ಟುವಿಕೆ ಮೇಲೆ ಕೆಟ್ಟ ಪರಿಣಾಮ ಬೀರಿ, ಇದರಿಂದ ಹೂವು ಉದುರುವುದಕ್ಕೆ ಕಾರಣವಾಗಬಹುದು.

 1. ರೋಗದ ಬಾಧೆಯೂ ಕೂಡ ಹೂವು ಉದುರುವಿಕೆಗೆ ಕಾರಣವಾಗಬಹುದು. ಶಿಲೀಂದ್ರಗಳಿಂದ ಉಂಟಾಗುವ ರೋಗಗಳಾದ ಬೂದಿ ರೋಗ, ಬೂಜು ತುಪ್ಪಟ ರೋಗ, ಕಪ್ಪು ಚುಕ್ಕೆರೋಗ, ಇನ್ನಿತರವುಗಳು, ದುಂಡಾಣುವಿನಿಂದ ಉಂಟಾಗುವ ರೋಗಗಳಾದ ದುಂಡಾಣು ಎಲೆ ಚುಕ್ಕೆರೋಗ, ಇನ್ನಿತರವುಗಳು ಹಾಗೂ ನಂಜಾಣುವಿನಿಂದ ಉಂಟಾಗುವ ನಂಜುರೋಗಗಳಾದ ಪಪ್ಪಾಯ ಉಂಗುರ ಚುಕ್ಕೆರೋಗ, ಎಲೆ ಸುರುಳಿ ನಂಜುರೋಗದ ಬಾಧೆಗಳಿಂದಲೂ ಕೂಡ ಹೂವು ಕಟ್ಟುವಿಕೆ ಮೇಲೆ ಪರಿಣಾಮ ಬೀರು, ಹೂವುಗಳು ಒಣಗಿ ಉದುರಿಹೋಗಬಹುದು.

 

 1. ಮಣ್ಣಿನ ಫಲವತ್ತತೆ ಕಡಿಮೆ ಇದ್ದು, ಲಘು ಪೋಷಕಾಂಶಗಳ ಕೊರತೆ, ವಿಶೇಷವಾಗಿ ಬೋರಾನ್ ಹಾಗೂ ಕ್ಯಾಲ್ಸಿಯಂ ಕೊರತೆ ಇದ್ದಾಗಲೂ ಕೂಡ ಅದು ಹೂವು ಉದುರುವುದ್ದಕ್ಕೆ ಕಾರಣವಾಗಬಹುದು.

   

 

ನಿರ್ವಹಣಾ ಕ್ರಮಗಳು

 1. ಬೆಳೆಯ ಅವಶ್ಯಕತೆಗೆ ತಕ್ಕಷ್ಟು ಮಾತ್ರ ಸಾರಜನಕವನ್ನು ಕೊಡಬೇಕು, ಹಾಗೂ ಆದಷ್ಟು ಅಮೋನಿಯಾಕಲ್ ರೊಪದಲ್ಲಿರುವ ಸಾರಜನಕದ ಉಪಯೋಗವನ್ನು ಕಡಿಮೆ ಮಾಡಬೇಕು.
 2. ಸರಿಯಾದ ಪ್ರಮಾಣದಲ್ಲಿ ಬೆಳೆಗೆ ತಕ್ಕಷ್ಟು ಮಾತ್ರ ನೀರನ್ನು ನೀಡಬೇಕು.
 3. ಬೆಳೆಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನ ಸಮಯಕ್ಕೆ ಸರಿಯಾಗಿ ನೀಡಬೇಕು.
 4. ರೋಗ ಹಾಗೂ ಕೀಟಗಳನ್ನ ಪರಿಣಾಮಕಾರಿ ರೀತಿಯಲ್ಲಿ ನಿರ್ವಹಣೆ ಮಾಡಬೇಕು.

 

ಕೆಳಗೆ ತಿಳಿಸಿರುವ ಸಂಯೋಜನೆಗಳನ್ನ ಸಿಂಪರಣೆ ಮಾಡುವುದರ ಮೂಲಕ ಪಪ್ಪಾಯ/ಪರಂಗಿ ಬೆಳೆಯಲ್ಲಿ ಹೂವು ಉದುರುವಿಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ತಡೆಗಟ್ಟಬಹುದು

ಸಂಯೋಜನೆ 1

Blitox 2 gm/L + Plantomycin 0.5gm/L + Magnum Mn 0.5 gm/L + V Zyme- 2 mL/L

ಸಂಯೋಜನೆ 2

Ridomet 0.5 gm/L + Confidor 0.5 mL/L + Boron 20% 1 gm/L + Econeem plus 1% 1 mL/L

 

 

ಸಂಯೋಜನೆ 3

Avtar 2 gm/L + Anant 0.5 gm/L + Ahaar 2 mL/L + Econeem plus 1% 1 mL/L

 

 

ಮೇಲೆ ತಿಳಿಸಿರುವ ಸಂಯೋಜನೆಗಳು ಹೂವು ಉದುರುವಿಕೆಯನ್ನ ತಡೆಗಟ್ಟುವುದರ ಜೊತೆಗೆ, ರೋಗ ಹಾಗೂ ಕೀಟಗಳ ಬಾಧೆಯಿಂದ ಕೂಡ ರಕ್ಷಣೆಯನ್ನ ಮಾಡುತ್ತವೆ. ಜೊತೆಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ಆರೋಗ್ಯಕರವಾದ ಹೂವು ಬಿಡುವಿಕೆಯನ್ನು ಸಹ ಹೆಚ್ಚಿಸುತ್ತವೆ.      

   **********

Dr. Asha K M

BigHaat

 **********

For more information kindly call on 8050797979 or give missed call on 180030002434 during office hours 10 AM to 5 PM 

 ____________________________________________

 

Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.


Leave a comment

This site is protected by reCAPTCHA and the Google Privacy Policy and Terms of Service apply.


Explore more

Share this