ನಿಮ್ಮ ಮಾವು ಫಸಲನ್ನು ಹಣ್ಣು ನೊಣಗಳಿಂದ ರಕ್ಷಿಸಿ

ಮಾವು ಹಣ್ಣಿನ ಬೆಳೆಯಲ್ಲಿ ಪ್ರಮುಖ ಕೀಟಗಳಲ್ಲಿ ಒಂದಾಗಿರುವ ಹಣ್ಣಿನ ನೊಣವು (ಫ್ರೂಟ್ ಫ್ಲೈ) ಪ್ರತಿ ವರ್ಷ ಮಾವಿನ ಬೆಳೆ ಮೇಲೆ ತೀವ್ರವಾಗಿ ದಾಳಿಮಾಡುತ್ತಿದ್ದು, ಇದರಿಂದ ಸರಾಸರಿ 25 ರಿಂದ 30 ರಷ್ಟು ಇಳುವರಿ ನಷ್ಟವಾಗುವುದರ ಜೊತೆಗೆ ಹಣ್ಣುಗಳು ಗುಣಮಟ್ಟವನ್ನು ಕಳೆದುಕೊಳ್ಳುತ್ತವೆ. ಇಂತಹ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತದೆ, ಇದರಿಂದ ರೈತರು ಆರ್ಥಿಕ ನಷ್ಟವನ್ನ ಅನುಭವಿಸಬೇಕಾದ ಸಂಭವ ಬರುತ್ತದೆ. ಈ ಕೀಟಗಳ ಸಂಖ್ಯೆ ಅತಿ ಹೆಚ್ಚು ಇದ್ದಾಗ, ಇದು ಪೂರ್ಣ ಬೆಳೆ ನಷ್ಟಕ್ಕೂ ಸಹ ಕಾರಣವಾಗಬಹುದು. ಆದ್ದರಿಂದ ರೈತರು ಸಮಗ್ರ ಕೀಟ ನಿರ್ವಹಣಾ ಪದ್ಧತಿಗಳನ್ನು ಅನುಸರಿಸಿ ಅತ್ಯಂತ ಜಾಗರೋಕತೆಯಿಂದ ಈ ಕೀಟವನ್ನ ನಿರ್ವಹಣೆ ಮಾಡಬೇಕಾಗುತ್ತದೆ.

 

ವಿಶೇಷವಾಗಿ ಮಾವಿನ ಕಾಯಿ ಮತ್ತು ಹಣ್ಣುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಸಂದರ್ಭದಲ್ಲಿ ಹಣ್ಣುಗಳು, ಹಣ್ಣು ನೊಣಗಳಿಂದ (ಫ್ರೂಟ್ ಫ್ಲೈ) ಮುಕ್ತವಾಗಿದೆಯೇ ಎಂದು ಪರಿಶೀಲಿಸಿದ ನಂತರವೇ ರಫ್ತು ಮಾಡಲಾಗುವುದು. ಒಂದೊಂಮ್ಮೆ ಪರಿಶೀಲಿಸಿದ ಹಂತದಲ್ಲಿ ಈ ಕೀಟದ ಮರಿಹುಳುಗಳು ಇರುವುದು ಕಂಡುಬಂದಲ್ಲಿ ಅಂತಹ ಹಣ್ಣುಗಳನ್ನು ರಫ್ತು ಮಾಡಲಾಗುವುದಿಲ್ಲ. ಆದ್ದರಿಂದ ಹಣ್ಣುಗಳನ್ನು ಹೊರದೇಶಕ್ಕೆ ರಫ್ತು ಮಾಡುವ ರೈತರು ಅತ್ಯಂತ ಹೆಚ್ಚಿನ ಎಚ್ಚರಿಕೆಯನ್ನ ವಹಿಸಬೇಕಾಗುತ್ತದೆ.

 

ಹಾನಿಯ ಲಕ್ಷಣ

ಈ ಕೀಟದ ಪ್ರೌಢ ಹಣ್ಣು ನೊಣಗಳು ಬಲಿತ ಕಾಯಿಗಳ ಮೇಲೆ ಚುಚ್ಚಿ ಒಳಭಾಗದ ತಿರುಳಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ನಂತರ ಮೊಟ್ಟೆಯಿಂದ ಹೊರಬರುವ ಹಳದಿ ಮರಿಹುಳುಗಳು ತಿರುಳನ್ನು ತಿನ್ನುತ್ತಾ ಬೆಳೆಯುತ್ತವೆ ಇದರಿಂದ ಹಣ್ಣಿನ ತಿರುಳು ಕೊಳೆಯುತ್ತಾ ಹೋಗಿ, ಬಾಧಿತ ಹಣ್ಣುಗಳ ಮೇಲೆ ಕಪ್ಪು ಚುಕ್ಕೆಗಳು/ರಂಧ್ರಗಳು ಕಾಣಬರುತ್ತವೆ. ಇದರ ಕಾರಣ ನಿರೀಕ್ಷೆಗೂ ಮೊದಲೆ ಕಾಯಿಗಳು ಮಾಗಿ ಹಣ್ಣಾಗುತ್ತವೆ ಅಥವಾ ಕೊಳೆತು ಉದುರಿ ಕೆಳಗೆ ಬೀಳುತ್ತವೆ.

 

ಕಾರಣಗಳು

  1. ಪ್ರಬುದ್ಧಾವಸ್ಥೆಯನ್ನು (ಪ್ಯೂಪಾ) ತಲುಪುವ ಕೀಟಗಳು ಮಣ್ಣಿನಲ್ಲಿ ಅಡಗಿಕೊಂಡು ಮತ್ತೆ ಚಿಟ್ಟೆಗಳಾಗಿ ಮೊಟ್ಟೆ ಇಟ್ಟು ಬೆಳೆಗೆ ಹಾನಿಯುಂಟುಮಾಡುತ್ತವೆ. 
  1. ಹಣ್ಣು ನೊಣಗಳಿಂದ ಹೆಚ್ಚು ಬಾಧೆಗೊಳಗಾಗುವ ಬೆಳೆಗಳಾದ ಕಲ್ಲಂಗಡಿ, ಕರ್ಬೂಜ, ಲಿಂಬು, ಸೀಬೆ, ಪಪ್ಪಾಯ ಹಾಗೂ ಇನ್ನಿತರ ಬೆಳೆಗಳು ನಿಮ್ಮ ಮಾವಿನ ತೋಟದಲ್ಲಿ ಅಥವಾ ನಿಮ್ಮ ತೋಟದ ಹತ್ತಿರದಲ್ಲಿ ಇದ್ದಾಗ ನಿಮ್ಮ ಮಾವಿನ ಬೆಳೆಯ ಮೇಲೆ ಹಣ್ಣು ನೊಣಗಳ ಹಾನಿಯನ್ನು ಕಾಣಬಹುದು. 
  1. ಒಂದೇ ತೋಟದಲ್ಲಿ ಹಲವಾರು ಮಾವಿನ ತಳಿಗಳನ್ನು ಬೆಳೆಯುವುದರಿಂದ

  1. ಹಣ್ಣು ನೊಣಗಳ ಹಾವಳಿಯು ಹಣ್ಣು ಬಿಡುವಿಕೆಯ ಸಂದರ್ಭದಲ್ಲಿ ಹೆಚ್ಚಾಗಿ ಕಂಡುಬರುತ್ತವೆ, ಈ ನಿಟ್ಟಿನಲ್ಲಿ ವಿವಿಧ ಬಗೆಯ ಮಾವಿನ ತಳಿಗಳು ಅದರಲ್ಲೂ ಬೇರೆ ಬೇರೆ ಸಮಯದಲ್ಲಿ ಹಣ್ಣುಗಳನ್ನು ನೀಡುವ ತಳಿಗಳನ್ನು ಒಂದೇ ತೋಟದಲ್ಲಿ ಬೆಳೆಯುವುದರಿಂದ, ಹಣ್ಣು ನೊಣಗಳಿಗೆ ನಿರಂತರವಾಗಿ ದಾಳಿ ಮಾಡುವುದಕ್ಕೆ ಅವಕಾಶ ಸಿಗುತ್ತದೆ ಜೊತಗೆ ಅವುಗಳ ಸಂಖ್ಯೆ ತೀವ್ರವಾಗಿ, ಕೊನೆಯದಾಗಿ ಇಳುವರಿಗೆ ಬರುವ ತಳಿಗಳ ಮೇಲೆ ಹಣ್ಣು ನೊಣಗಳ ದಾಳಿ ಹೆಚ್ಚಾಗಿ ಕಂಡುಬರುವುದು.

  

ಮುಂಜಾಗ್ರತಾ ಕ್ರಮಗಳು 

  1. ಕೆಳಗೆ ಬಿದ್ದ ಎಲ್ಲಾ ಹಣ್ಣುಗಳನ್ನು ಸಂಗ್ರಹಿಸಿ ನಾಶ ಮಾಡಬೇಕು

  1. ಪ್ರಬುದ್ಧಾವಸ್ಥೆಯನ್ನು (ಪ್ಯೂಪಾ) ತಲುಪುವ ಕೀಟಗಳು ಮಣ್ಣಿನಲ್ಲಿ ಅಡಗಿಕೊಂಡು ಮತ್ತೆ ಚಿಟ್ಟೆಗಳಾಗಿ ಮೊಟ್ಟೆ ಇಟ್ಟು ಬೆಳೆಗೆ ಹಾನಿಯುಂಟುಮಾಡುತ್ತವೆ, ಆದ್ದರಿಂದ 10-15 cm ಆಳದವರೆಗೆ ಮಣ್ಣನ್ನು ಉಳುಮೆ ಮಾಡಿ ಪ್ಯೂಪಾಗಳ ಮೇಲೆ ಸೂರ್ಯ ಕಿರಣಗಳು ತಾಕುವಹಾಗೆ ಮಾಡುವುದರಿಂದ ಪ್ಯೂಪಾಗಳು ಸಾಯುತ್ತವೆ, ಇದರಿಂದ ಕೀಟಗಳ ಸಂತಾನೋತ್ಪತ್ತಿಯನ್ನು ತಗ್ಗಿಸಿ, ಹಾನಿಯನ್ನು ಕಡೆಮೇ ಮಾಡಬಹುದು.

 

  1. ತೋಟದಲ್ಲಿ ಕಳೆ ಇಲ್ಲದಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು, ಇದರಿಂದ ಕೀಟದ ಬಾಧೆ ಕಡಿಮೆಯಾಗುವುದರ ಜೊತೆಗೆ ಬಿದ್ದ ಹಣ್ಣುಗಳನ್ನು ಆಯ್ದುಕೊಳ್ಳಲು ಸುಲಭವಾಗುತ್ತದೆ.

  1. ನಿಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಮೊದಲು ಅಥವಾ ಬೇಗ ಇಳುವರಿಗೆ ಬರುವ ಮಾವಿನ ತಳಿಗೆ ಬೇಡಿಕೆ ಇದ್ದಲ್ಲಿ, ಅಂತಹ ತಳಿಗಳನ್ನು ಬೆಳೆಯಿರಿ ಇದರಿಂದ ಹಣ್ಣು ನೊಣಗಳ ಸಂಖ್ಯೆ ತೀವ್ರವಾಗುವುದಕ್ಕೂ ಮುನ್ನ ನಿಮ್ಮ ತೋಟದಲ್ಲಿ ಮಾವಿನ ಹಣ್ಣುಗಳ ಕಟಾವು ಮುಗಿದಿರುತ್ತದೆ.

                

  1. ಹಣ್ಣು ನೊಣಗಳಿಂದ ಹೆಚ್ಚು ಬಾಧೆಗೊಳಗಾಗುವ ಕಲ್ಲಂಗಡಿ, ಕರ್ಬೂಜ, ಲಿಂಬು, ಸೀಬೆ, ಪಪ್ಪಾಯ ಹಾಗೂ ಇನ್ನಿತರ ಬೆಳೆಗಳನ್ನು ಮಾವಿನ ಬೆಳೆಯ ಹತ್ತಿರ ಬೆಳೆಯಬೇಡಿ, ಅಥವಾ ಸುತ್ತಮುತ್ತ ಈ ಬೆಳೆಗಳು ಇದ್ದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ.

 

 ನಿರ್ವಹಣೆ

 ಈ ಕೀಟದ ಬಾಧೆಯನ್ನು ತಡೆಯಲು ರೈತರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಬೇಕಾಗುತ್ತದೆ, ಅದಕ್ಕಾಗಿ ಸಮಗ್ರ ಕೀಟ ನಿರ್ವಹಣೆಯನ್ನು ಮಾಡಬೇಕು, ಅಂದರೆ ನಿಯಮಿತವಾದ ಕೀಟನಾಶಕಗಳ ಸಿಂಪರಣೆ ಜೊತೆಗೆ ತೋಟದಲ್ಲಿ ಮೊಹಕ ಬಲೆಗಳನ್ನು ತೂಗು ಹಾಕುವುದರಿಂದ ರೈತರು ಈ ಕೀಟದ ಬಾಧೆಯನ್ನು ತಡೆಗಟ್ಟಿ ಉತ್ತಮ ಗುಣಮಟ್ಟದ ಫಸಲನ್ನು ಪಡೆಯಬಹುದು.

 

ಮಾವು ಹಣ್ಣುಗಳು ಬಿಡುವ ಸಮಯದಿಂದ ಕಾಟಾವು ಪೂರ್ಣಗೊಳ್ಳುವವರೆಗೂ ಮುಂಜಾಗ್ರತಾ ಕ್ರಮವಾಗಿ ಹಾಗೂ ಹಣ್ಣುನೊಣಗಳ ಹಾವಳಿ ಇರುವ ಸಂದರ್ಭಗಳಲ್ಲಿ ಮೊಹಕ ಬಲೆಗಳನ್ನು ತೋಟದಲ್ಲಿ ತೂಗುಹಾಕುವುದು ಅತ್ಯವಶ್ಯಕ. ಇದರಿಂದ ಅತ್ಯಂತ ಪರಿಣಾಮಕಾರಿಯಾಗಿ ಹಣ್ಣುನೊಣಗಳನ್ನು ನಿರ್ವಹಣೆ ಮಾಡಬಹುದು. 

 1. ನೈಸರ್ಗಿ ನಿರ್ವಹಣಾ ಪದ್ಧತಿ:  ಮೊಹಕ ಬಲೆಗಳನ್ನು ತೂಗು ಹಾಕುವುದು

 ತಪಸ್ ತೇಜ್ ಆಕರ್ಷಕ ತೂಗು ಬಲೆ (Tapas Premium quality fruit fly lure ) + ಹಣ್ಣು ನೊಣ ಆಕರ್ಷಿಸುವ ಪದಾರ್ಥ  (Pheromone Trap)

 Barrix Catch Fruit Fly Trap

 

For more products click the link: https://www.bighaat.com/pages/search-results-page?q=fruit+fly+traps

 

2. ಕೀಟನಾಶಕಗಳ ಸಿಂಪರಣೆ:

ಅವಶ್ಯಕತೆ ಬಿದ್ದಲ್ಲಿ ಮೊಹಕ ಬಲೆಗಳ ಜೊತೆಗೆ ನಿಯಮಿತವಾಗಿ ಕೆಳಗೆ ತಿಳಿಸಿರುವ ಕೀಟನಾಶಕಗಳ ಸಿಂಪರಣೆ ಮಾಡುವುದರಿಂದ ಹಣ್ಣು ನೊಣಗಳನ್ನು ನಿಯಂತ್ರಿಸಬಹುದು

 ಕರಾಟೆ @ 2ml/L ಅಥವಾ ಅಲಿಕಾ @ 0.4 ml/L ಅಥವಾ ಎಕಾಲಕ್ಸ್ @ 2ml/L ಇವುಗಳಲ್ಲಿ ಯಾವುದಾದರೂ ಒಂದನ್ನ ಬೇವಿನ ಎಣ್ಣೆಯ ಜೊತೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.

 

For more products click the link: https://www.bighaat.com/pages/search-results-page?q=insecticides+fruit+flies

 

*********

Dr. Asha, K.M.,

BigHaat

 ______________________________________________________________

ಹೆಚ್ಚಿನ ಮಾಹಿತಿಗಾಗಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ , ದಯಮಾಡಿ 8050797979 ನಂಬರ್ ಗೆ ಕರೆ ಮಾಡಿ ಅಥವಾ 180030002434 ನಂಬರ್ ಗೆ ಮಿಸ್ಡ್ ಕಾಲ್ ನೀಡಿ.

____________________________________________________________

Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.

 

                                             **************


Leave a comment

This site is protected by reCAPTCHA and the Google Privacy Policy and Terms of Service apply.


Explore more

Share this